ಚಂಡೀಗಢ: ಅಕ್ರಮ ಮಾರ್ಗದಿಂದ ಹಾಗೂ ಬೆದರಿಕೆಯೊಡ್ಡುವ ಮೂಲಕ ಚಂಡೀಗಢ ಮಹಾನಗರ ಪಾಲಿಕೆಯ ಸದಸ್ಯರನ್ನು ಬಿಜೆಪಿ ಖರೀದಿಸಿದೆ ಎಂದು ಎಎಪಿ ಸೋಮವಾರ ಆರೋಪಿಸಿದೆ.

ಚಂಡೀಗಢ ಮಹಾನಗರ ಪಾಲಿಕೆಯ ಎಎಪಿ ಸದಸ್ಯರಾದ ನೇಹಾ, ಪೂನಂ ಮತ್ತು ಗುರುಚರಣ್ ಕಾಲಾ ಅವರು ಭಾನುವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಬಿಜೆಪಿ ಮುಖಂಡ ಮನೋಜ್ ಸೋನ್‌ಕರ್ ಅವರು ಚಂಡೀಗಢ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಈ ಬೆಳವಣಿಗೆ ನಡೆದಿತ್ತು. ಮೇಯರ್ ಚುನಾವಣೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವುದಕ್ಕೂ ಮುನ್ನಾದಿನ ಅವರು ರಾಜೀನಾಮೆ ನೀಡಿದ್ದರು.

‘ಪಾಲಿಕೆ ಸದಸ್ಯರನ್ನು ಖರೀದಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ನಡೆದಿದೆ. ‘ಆಪರೇಶಷನ್ ಕಮಲ’ದ ಅಂಗವಾಗಿ ಈ ಬೆಳವಣಿಗೆ ನಡೆದಿದೆ’ ಎಂದು ಎಎಪಿ ಚಂಡೀಗಢ ಘಟಕದ ಅಧಕ್ಷ ಸನ್ನಿ ಅಹ್ಲುವಾಲಿಯಾ ಆರೋಪಿಸಿದರು.

ಮೇಯರ್ ಚುನಾವಣೆಯು ಬಿಜೆಪಿಯ ನಿಜಬಣ್ಣವನ್ನು ಜನರ ಮುಂದಿರಿಸಿದೆ ಎಂದು ಕಾಂಗ್ರೆಸ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.