ನವದೆಹಲಿ: ‘ಚಂದ್ರಯಾನ–3’ ಗಗನನೌಕೆಯು ಚಂದಿರನ ಅಂಗಳದಲ್ಲಿರುವ ಅತ್ಯಂತ ಹಳೆಯ ಕುಳಿಗಳಲ್ಲಿ ಇಳಿದಿರುವ ಸಾಧ್ಯತೆ ಇದೆ ಎಂದು ಇಸ್ರೊ ವಿಜ್ಞಾನಿಗಳು ಹೇಳಿದ್ದಾರೆ.

ಈ ಕುಳಿಗಳು 3.85 ಶತಕೋಟಿ ವರ್ಷಗಳ ಹಿಂದೆ ರಚನೆಯಾಗಿವೆ. ಇವು ಚಂದ್ರನಲ್ಲಿರುವ ಅತ್ಯಂತ ಹಳೆಯ ಕುಳಿಗಳು ಎಂದು ಅಹಮದಾಬಾದ್‌ನಲ್ಲಿರುವ ಭೌತಿಕ ಸಂಶೋಧನಾ ಪ್ರಯೋಗಾಲಯ ಹಾಗೂ ಇಸ್ರೊ ಸಂಶೋಧಕರ ತಂಡ ಹೇಳಿದೆ.

ಪ್ರಗ್ಯಾನ್ (ರೋವರ್) ಕಳುಹಿಸಿರುವ ಚಿತ್ರಗಳ ವಿಶ್ಲೇಷಣೆಯಿಂದ ಇದು ಗೊತ್ತಾಗಿದೆ.

‘ಚಂದ್ರಯಾನ–3 ಗಗನನೌಕೆ ಇಳಿದಿದ್ದ ಜಾಗ ಚಂದಿರನ ಮೇಲ್ಮೈನಲ್ಲಿಯೇ ಅತಿ ವಿಶಿಷ್ಟ ಸ್ಥಳವಾಗಿದೆ. ಯಾವ ಬಾಹ್ಯಾಕಾಶ ಕಾರ್ಯಕ್ರಮಗಳ ನೌಕೆಗಳೂ ಈ ಸ್ಥಳದಲ್ಲಿ ಇಳಿದಿಲ್ಲ. ಪ್ರಗ್ಯಾನ್ (ರೋವರ್) ಕಳಿಸಿರುವ ಚಿತ್ರಗಳು ಚಂದ್ರನ ಈ ಅಕ್ಷಾಂಶದಿಂದ ಕಳುಹಿಸಲಾಗಿರುವ ಮೊದಲ ಚಿತ್ರಗಳಾಗಿವೆ’ ಎಂದು ಭೌತಿಕ ಸಂಶೋಧನಾ ಪ್ರಯೋಗಾಲಯದ ಗ್ರಹ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಸ್.ವಿಜಯನ್ ಹೇಳಿದ್ದಾರೆ.

‘ಈ ಚಿತ್ರಗಳು ಚಂದ್ರ ವಿಕಾಸ ಹೊಂದಿದ ಪ್ರಕ್ರಿಯೆ ಕುರಿತು ಮಾಹಿತಿ ನೀಡುತ್ತವೆ’ ಎಂದೂ ಹೇಳಿದ್ದಾರೆ.

ಕ್ಷುದ್ರಗ್ರಹವೊಂದು ಗ್ರಹ ಅಥವಾ ಚಂದ್ರನ ಮೇಲ್ಮೈಗೆ ರಭಸದಿಂದ ಅಪ್ಪಳಿಸಿದಾಗ ಈ ಕುಳಿಗಳು ಉಂಟಾಗುತ್ತವೆ. ಚಂದ್ರನಲ್ಲಿ ಉಂಟಾಗಿರುವ ಈ ಕುಳಿಯ ವ್ಯಾಸ 160 ಕಿ.ಮೀ.ನಷ್ಟಿದ್ದು, ಅರ್ಧವೃತ್ತಾಕಾರದಲ್ಲಿ ಇರುವುದು ಚಿತ್ರಗಳ ವಿಶ್ಲೇಷಣೆಯಿಂದ ತಿಳಿದು ಬಂದಿದೆ ಎಂದು ವಿಜಯನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.