ದೇಶದಲ್ಲಿ ಎಷ್ಟು ಜಾತಿಗಳಿವೆ ಎಂಬುದನ್ನು ರಾಹುಲ್ ಗಾಂಧಿ ಹೇಳಬೇಕು. ರಾಜಕೀಯವು ಜನರ ಸೇವೆಗಾಗಿ ಇರುವುದೇ ವಿನಾ ಸರ್ಕಾರ ರಚಿಸುವುದಕ್ಕಾಗಿ ಮಾತ್ರ ಅಲ್ಲ
ರಾಜನಾಥ್ ಸಿಂಗ್ ರಕ್ಷಣಾ ಸಚಿವ
‘ರಾಜ್ಯ ಸರ್ಕಾರ ಭ್ರಷ್ಟ’
ಜಾರ್ಖಂಡ್‌ನ ಆಡಳಿತಾರೂಢ ಜೆಎಂಎಂ–ಕಾಂಗ್ರೆಸ್–ಆರ್‌ಜೆಡಿ ಮೈತ್ರಿ ಕೂಟವು ವ್ಯಾಪಾಕ ಭ್ರಷ್ಟಾಚಾರದಲ್ಲಿ ತೊಡಗಿದ್ದು ಮರಣ ಪ್ರಮಾಣ ಪತ್ರ ನೀಡುವುದಕ್ಕೂ ಲಂಚ ಪಡೆಯುತ್ತಿದೆ ಎಂದು ರಾಜನಾಥ್ ಸಿಂಗ್ ಆರೋಪಿಸಿದರು. ‘ಬಿಜೆಪಿ ಯಾವತ್ತೂ ಭ್ರಷ್ಟಾಚಾರದಲ್ಲಿ ತೊಡಗಿಲ್ಲ. ಇದುವರೆಗೆ 13 ಮುಖ್ಯಮಂತ್ರಿಗಳು ಜಾರ್ಖಂಡ್‌ನಲ್ಲಿ ಆಡಳಿತ ನಡೆಸಿದ್ದು ಈ ಪೈಕಿ ಬಿಜೆಪಿಯ ಮೂವರು ಮುಖ್ಯಮಂತ್ರಿಗಳು ಕೂಡ ಯಾವುದೇ ಭ್ರಷ್ಟಾಚಾರ ಆರೋಪಗಳನ್ನು ಎದುರಿಸಿರಲಿಲ್ಲ ಅಥವಾ ಜೈಲಿಗೂ ಹೋಗಿರಲಿಲ್ಲ’ ಎಂದರು. ‘ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಲಿದ್ದು ಮೊದಲ ಹಂತದಲ್ಲಿ ಮತದಾನ ನಡೆದ 43 ಕ್ಷೇತ್ರಗಳ ಪೈಕಿ ಮೂರನೇ ಎರಡು ಕ್ಷೇತ್ರಗಳಲ್ಲಿ ಪಕ್ಷ ಜಯಗಳಿಸಲಿದೆ’ ಎಂದು ಹೇಳಿದರು. ‘ಮೊದಲ ಹಂತದಲ್ಲಿ ಶೇ 3ರಷ್ಟು ಹೆಚ್ಚು ಮತದಾನವಾಗಿರುವುದು ರಾಜ್ಯದಲ್ಲಿ ಎನ್‌ಡಿಎ ಸರ್ಕಾರಕ್ಕೆ ಬೆಂಬಲ ಸಿಕ್ಕಿದೆ ಎಂಬುದರ ಸಂಕೇತ. ಜಾರ್ಖಂಡ್‌ನಲ್ಲಿ ಬಿಜೆಪಿ ನೇತೃತ್ವದಲ್ಲಿ ಸ್ಥಿರ ಮತ್ತು ಭ್ರಷ್ಟಾಚಾರ ಮುಕ್ತ ಸರ್ಕಾರ ಬರಲಿದೆ ಎಂಬುದನ್ನು ಇದು ಸೂಚಿಸಿದೆ’ ಎಂದು ರಾಜನಾಥ್ ಸಿಂಗ್ ಹೇಳಿದರು.