ದೆಹಲಿ: ಕೋವಿಡ್-19 ಜಾಗೃತಿ ಅಭಿಯಾನದ ಭಾಗವಾಗಿ ನಾಗರಿಕರ ಅನುಕೂಲಕ್ಕಾಗಿ ತಾನು ಆರಂಭಿಸಿರುವ ನಾಲ್ಕು ಹೊಸ ರಾಷ್ಟ್ರೀಯ ಸಹಾಯವಾಣಿಗಳ ಸಂಖ್ಯೆಗಳನ್ನು ಬಿತ್ತರಿಸುವಂತೆ ಕೇಂದ್ರ ಸರ್ಕಾರವು ಖಾಸಗಿ ಸುದ್ದಿ ವಾಹಿನಿಗಳಿಗೆ ಭಾನುವಾರ ಮನವಿ ಮಾಡಿದೆ.

ಇದನ್ನೂ ನೋಡಿ:ಕೋವಿಡ್-19: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಲಭ್ಯ ಸಹಾಯವಾಣಿ ಸಂಖ್ಯೆ ತಿಳಿಯಲು ಕ್ಲಿಕ್ ಮಾಡಿ

ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಸರ್ಕಾರ ಸೂಚಿಸಿರುವ ಚಿಕಿತ್ಸಾ ಮಾರ್ಗಸೂಚಿ, ನಡವಳಿಕೆ, ಲಸಿಕೆ ಅಭಿಯಾನದ ಕುರಿತು ಪ್ರಚಾರ ಮಾಡುವಲ್ಲಿ ಮತ್ತು ಕೋವಿಡ್ ವಿರುದ್ಧ ಅರಿವು ಮೂಡಿಸಲು ನೆರವಾಗಿದ್ದಕ್ಕಾಗಿ ಕೇಂದ್ರ ಸರ್ಕಾರವು ಸುದ್ದಿ ವಾಹಿನಿಗಳನ್ನು ಪ್ರಶಂಸಿಸಿದೆ.

'ಕೋವಿಡ್ ನಿಯಂತ್ರಿಸುವ ಉದ್ದೇಶವನ್ನು ಸಾಕಾರಗೊಳಿಸುವ ಉದ್ದೇಶದಿಂದ, ನಾಲ್ಕು ರಾಷ್ಟ್ರೀಯ ಮಟ್ಟದ ಸಹಾಯವಾಣಿ ಸಂಖ್ಯೆಯನ್ನು ಪ್ರೈಮ್ ಟೈಂನಲ್ಲಿ, ಜಾಹೀರಾತು ಸಂದರ್ಭಗಳಲ್ಲಿ ಪ್ರಸಾರ ಮಾಡುವಂತೆ ಸೂಚಿಸಲಾಗಿದೆ,' ಎಂದು ಕೇಂದ್ರ ತಿಳಿಸಿದೆ.

ರಾಷ್ಟ್ರ ಮಟ್ಟದ ಕೋವಿಡ್ ಸಹಾಯವಾಣಿ

- 1075- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ಸಹಾಯವಾಣಿ
- 1098-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಮಕ್ಕಳ ಸಹಾಯವಾಣಿ
- 14567-ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಹಿರಿಯ ನಾಗರಿಕರ ಸಹಾಯವಾಣಿ (ದೆಹಲಿ, ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ , ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ)
- 080- 46110007-ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ಸಹಾಯವಾಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.