ನವದೆಹಲಿ: ಕೋಚಿಂಗ್ ಸೆಂಟರ್‌ಗಳು ಮೃತ್ಯುಕೂಪ ಗಳಾಗಿದ್ದು, ವಿದ್ಯಾರ್ಥಿಗಳ ಜೀವದ ಜತೆಗೆ ಚೆಲ್ಲಾಟವಾಡು ತ್ತಿವೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದ್ದು, ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಇತ್ತೀಚೆಗೆ ದೆಹಲಿಯಲ್ಲಿ ಮೂವರು ಐಎಎಸ್ ಆಕಾಂಕ್ಷಿಗಳು ಕೋಚಿಂಗ್ ಕೇಂದ್ರದ ನೆಲಮಾಳಿಗೆಗೆ ನುಗ್ಗಿದ ಪ್ರವಾಹದ ನೀರಿನಲ್ಲಿ ಮುಳುಗಿ ಮೃತಪಟ್ಟ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಪರಿಗಣಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು, ಈ ಘಟನೆಯು ಎಲ್ಲರ ಕಣ್ಣು ತೆರೆಸುವಂತಿದೆ ಎಂದು ಹೇಳಿದೆ.

‘ಈಗ ನಡೆದಿರುವ ಘಟನೆ ಭಯಾನಕವಾದುದು. ಅಗತ್ಯ ಬಿದ್ದರೆ ಈ ಕೋಚಿಂಗ್ ಸೆಂಟರ್‌ಗಳ ಬಾಗಿಲು ಮುಚ್ಚಿಸುತ್ತೇವೆ. ಸದ್ಯಕ್ಕೆ, ಕಟ್ಟಡದ ನಿಯಮಗಳು ಮತ್ತು ಇತರ ಸುರಕ್ಷತಾ ಮಾನದಂಡಗಳನ್ನು ಸರಿಯಾಗಿ ಪಾಲಿಸದೇ ಇದ್ದರೆ ಆನ್‌ಲೈನ್ ಕೋಚಿಂಗ್ ಸೂಕ್ತ’ ಎಂದು ಪೀಠ ಹೇಳಿದೆ.

ಜುಲೈ 27ರಂದು ದೆಹಲಿಯ ಹಳೆಯ ರಾಜೀಂದರ್ ನಗರದ ರಾವ್ ಐಎಎಸ್ ಸ್ಟಡಿ ಸರ್ಕಲ್‌ನ ನೆಲಮಾಳಿಗೆಯ ಗ್ರಂಥಾಲಯ ದಲ್ಲಿ ಅಧ್ಯಯನ ನಿರತವಾಗಿದ್ದ ಮೂವರು ಐಎಎಸ್ ಆಕಾಂಕ್ಷಿಗಳು, ಗ್ರಂಥಾಲಯಕ್ಕೆ ನುಗ್ಗಿದ ಪ್ರವಾಹದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ರಾವ್ ಐಎಎಸ್ ಸ್ಟಡಿ ಸರ್ಕಲ್ ಸಿಇಒ ಅಭಿಷೇಕ್ ಗುಪ್ತಾ ಮತ್ತು ಸಂಯೋಜಕ ದೇಶಪಾಲ್ ಸಿಂಗ್ ಸೇರಿ ಏಳು ಮಂದಿಯನ್ನು ಬಂಧಿಸಲಾಗಿದೆ.
.ಪಟ್ನಾ: ತಳಮಹಡಿಯಲ್ಲಿ ಕೋಚಿಂಗ್ ಸೆಂಟರ್ ಇದ್ದಲ್ಲಿ ಬೀಗಮುದ್ರೆ.ದೆಹಲಿ: ಕೋಚಿಂಗ್ ಸೆಂಟರ್ ಅವಘಡ ಪ್ರಕರಣ ಸಿಬಿಐಗೆ.ಕೋಚಿಂಗ್ ಸೆಂಟರ್ ದುರಂತ: ಮೃತರ ಹೆಸರಿನಲ್ಲಿ ಗ್ರಂಥಾಲಯ ಸ್ಥಾಪಿಸಲು ಎಂಸಿಡಿ ಆದೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.