ನವದೆಹಲಿ: ಮಾಲಿನ್ಯದ ಮೂಲ ಪತ್ತೆಹಚ್ಚಲು ಹಾಗೂ ಗಾಳಿಯ ಗುಣಮಟ್ಟ ಮಾನದಂಡವನ್ನು ಪರಿವೀಕ್ಷಿಸಲು ಶಾಲೆಗಳಲ್ಲಿ ಸಂಚಾರಿ ಗಾಳಿಯ ಗುಣಮಟ್ಟ ನಿಗಾ ವಾಹನವನ್ನು ನಿಯೋಜಿಸಲು ದೆಹಲಿ ಸರ್ಕಾರ ಮುಂದಾಗಿದೆ ಎಂದು ಅಧಿಕೃತ ದಾಖಲೆಯೊಂದರಿಂದ ತಿಳಿದು ಬಂದಿದೆ.

‘ಸಂಚಾರಿ ಗಾಳಿ ಗುಣಮಟ್ಟ ವಾಹನಗಳ ಪಾರ್ಕಿಂಗ್ಗೆ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯೊಂದಿಗೆ ಸಹಕರಿಸಲು ಎಲ್ಲಾ ಶಾಲೆಗಳ ಮುಖ್ಯಸ್ಥರಿಗೆ ನಿರ್ದೇಶಿಸಲಾಗಿದೆ’ ಎಂದು ದೆಹಲಿ ಸರ್ಕಾರದ ಶಿಕ್ಷಣ ನಿರ್ದೇಶನಾಲಯ ಹೊರಡಿಸಿದ ಸುತ್ತೋಲೆಯಲ್ಲಿ ಹೇಳಲಾಗಿದೆ.

ಕೇವಲ ಶಾಲೆಗಳಲ್ಲಿ ಮಾತ್ರವಲ್ಲ, ಆಸ್ಪತ್ರೆ, ಬಸ್ ನಿಲ್ದಾಣ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಈ ವಾಹನಗಳನ್ನು ನಿಲ್ಲಿಸಬೇಕು ಎಂದು ಪರಿಸರವಾದಿ ಭರ್ವೀನ್ ಖಂಡ್ರಿ ಒತ್ತಾಯಿಸಿದ್ದಾರೆ.

ಈ ವಾಹನಗಳು ಕ್ಷಣ ಕ್ಷಣದ ವಾಯುಗುಣಮಟ್ಟವನ್ನು ತಿಳಿಸುತ್ತದೆ. ಹೀಗಾಗಿ ಹೊರಾಂಗಣ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ಇದರಿಂದಾಗಿ ಜನರಲ್ಲಿ ಜಾಗೃತಿ ಮೂಡುವುದು ಮಾತ್ರವಲ್ಲದೆ, ತಮ್ಮ ಆರೋಗ್ಯದ ಬಗ್ಗೆ ಜನರಿಗೆ ತಮ್ಮ ಆರೋಗ್ಯದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.