ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅತ್ಯಂತ ಕಳಪೆ ವಾಯು ಗುಣಮಟ್ಟ ಹೊಂದಿರುವ 13 ಸ್ಥಳಗಳಲ್ಲಿ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸಮನ್ವಯ ಸಮಿತಿಗಳನ್ನು ರಚಿಸಲಾಗಿದೆ ಎಂದು ಪರಿಸರ ಸಚಿವ ಗೋಪಾಲ್ ರಾಯ್ ಹೇಳಿದ್ದಾರೆ.

ದೆಹಲಿಯ ಸಂಪೂರ್ಣ ವಾಯು ಗುಣಮಟ್ಟ ಕಳಪೆಯಾಗಿದೆ. 13 ಸ್ಥಳಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು 300(ಅತ್ಯಂತ ಕಳಪೆ) ದಾಟಿದ್ದು, ಇದು ಅಪಾಯಕಾರಿ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ನರೇಲಾ, ಬವಾನಾ, ಮುಂಡ್ಕಾ, ವಾಜಿರ್ಪುರ, ರೋಹಿಣಿ, ಆರ್,ಕೆ, ಪುರಂ, ಒಖ್ಲಾ, ಜಹಾಂಗಿರ್ಪುರಿ, ಆನಂದ ವಿಹಾರ, ಪಂಜಾಬಿ ಬಾಗ್, ಮಯಾಪುರಿ ಮತ್ತು ದ್ವಾರಕಾ ಸೆಕ್ಟರ್–18 ಅನ್ನು ಹಾಟ್ಸ್ಪಾಟ್ಗಳೆಂದು ಗುರುತಿಸಲಾಗಿದೆ.

ಸಮಿತಿಗಳಿಗೆ ದೆಹಲಿ ಪಾಲಿಕೆಯ ಉಪ ಆಯುಕ್ತರು ನೇತೃತ್ವ ವಹಿಸಲಿದ್ದಾರೆ ಎಂದು ರಾಯ್ ಹೇಳಿದ್ದಾರೆ.

ಪಾಲಿಕೆಯ ಎಂಜಿನಿಯರ್ಗಳನ್ನೂ ಹಾಟ್ಸ್ಪಾಟ್ಗಳಿಗೆ ನಿಯೋಜಿಸಲಾಗಿದ್ದು, ನಿತ್ಯ ಅವರೂ ವರದಿ ನೀಡಲಿದ್ದಾರೆ ಎಂದು ರಾಯ್ ಹೇಳಿದ್ದಾರೆ.

13 ಕಡೆಗಳಲ್ಲೂ ಎಕ್ಯೂಐ 300 ದಾಟಲು ಧೂಳಿನ ಕಣಗಳು ಆವರಿಸಿರುವುದೇ ಕಾರಣ. ಈ ಪ್ರದೇಶಗಳಲ್ಲಿ ಧೂಳನ್ನು ನಿಗ್ರಹಿಸಲು ಆ್ಯಂಟಿ–ಸ್ಮಾಗ್ ಗನ್ಗಳನ್ನು ಅಳವಡಿಸಲಾಗಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.