ನವದೆಹಲಿ: ಗುಂಡಿನ ದಾಳಿಗೆ ಒಳಗಾಗಿ ಗಾಯಗೊಂಡಿರುವ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರೋಗ್ಯ ವೃದ್ಧಿಯಾಗಲೆಂದು ದೆಹಲಿಯಲ್ಲಿ ಹಿಂದೂ ಸೇನಾ ಸಂಘಟನೆ ವಿಶೇಷ ಹವನ ನೆರವೇರಿಸಿದೆ.

ದೆಹಲಿಯ ಮಾ ಬಗಲಮುಖಿ ಶಾಂತಿ ಪೀಠದಲ್ಲಿ 1.25 ಲಕ್ಷ ಮಹಾಮೃತ್ಯುಂಜಯ ಜಪ ಹಾಗೂ ಹವನವನ್ನು ನೆರವೇರಿಸಲಾಗಿದೆ. ಮೃತ್ಯುಂಜಯ ಮಂತ್ರವು ಆಯಸ್ಸು, ಆರೋಗ್ಯವನ್ನು ವೃದ್ಧಿಮಾಡುತ್ತದೆ ಎನ್ನುವ ನಂಬಿಕೆಯಿದೆ.

ಹಿಂದೂ ಸೇನಾ ಸಂಘಟನೆಯ ವಕ್ತಾರರೊಬ್ಬರು ಸುದ್ದಿಗಾರರೊಂದಿಗೆ ಮಾತನಾಡಿ, ‘ಟ್ರಂಪ್ ಅವರ ಸುರಕ್ಷತೆಯ ಬಗ್ಗೆ ಆಳವಾದ ಕಾಳಜಿಯಿದೆ. ಹೀಗಾಗಿ ದೈವೀಕವಾಗಿ ಅವರಿಗೆ ನೆರವಾಗಲು ಈ ಪೂಜೆ ಮಾಡಲಾಗುತ್ತಿದೆ’ ಎಂದು ಎಎನ್ಐಗೆ ತಿಳಿಸಿದ್ದಾರೆ.

ಕಳೆದ ಶನಿವಾರ (ಜುಲೈ 13) ಪೆನ್ಸಿಲ್ವೇನಿಯಾದಲ್ಲಿ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಟ್ರಂಪ್ ಅವರ ಮೇಲೆ ದಾಳಿ ನಡೆದಿತ್ತು. ಈ ವೇಳೆ ಪ್ರೇಕ್ಷಕನೊಬ್ಬ ಮೃತಪಟ್ಟು, ಟ್ರಂಪ್ ಸೇರಿದಂತೆ ಮೂವರು ಗಾಯಗೊಂಡಿದ್ದರು.

ಸದ್ಯ 78 ವರ್ಷದ ಟ್ರಂಪ್ ಅವರು ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಟ್ರಂಪ್ ಬಿಡುಗಡೆಯಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
.ಅದೊಂದು ಭಯಾನಕ ಅನುಭವ: ಕೊಲೆ ಯತ್ನದ ಬಗ್ಗೆ ಡೊನಾಲ್ಡ್ ಟ್ರಂಪ್ ಮೊದಲ ಪ್ರತಿಕ್ರಿಯೆ.ಸಂಪಾದಕೀಯ | ಟ್ರಂಪ್ ಹತ್ಯೆ ಯತ್ನ ಖಂಡನೀಯ: ಬಂದೂಕು ನೀತಿ ಬದಲಾವಣೆಗೆ ಸಕಾಲ.ದೇವರ ದಯೆಯಿಂದ ಬದುಕುಳಿದಿರುವೆ: ಡೊನಾಲ್ಡ್ ಟ್ರಂಪ್.ಜಗನ್ನಾಥ ದೇವರ ಕೃಪೆಯಿಂದ ಟ್ರಂಪ್ ಪ್ರಾಣಾಪಾಯದಿಂದ ಪಾರು: ಇಸ್ಕಾನ್ ಉಪಾಧ್ಯಕ್ಷ.ಟ್ರಂಪ್ ಮೇಲೆ ದಾಳಿ; ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಅವಕಾಶವಿಲ್ಲ: ಖರ್ಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.