ನವದೆಹಲಿ: ನವದೆಹಲಿಯಲ್ಲಿ ತಾಪಮಾನ ಕುಸಿತ ಮುಂದುವರಿದಿದೆ. ಗುರುವಾರ ಕೇವಲ 10.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ಈ ಋತುವಿನಲ್ಲಿ ದೆಹಲಿಯಲ್ಲಿ ದಾಖಲಾದ ಅತ್ಯಂತ ಕನಿಷ್ಠ ತಾಪಮಾನವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಬುಧವಾರ ರಾತ್ರಿ ತಾಪಮಾನವು 11.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಮಂಗಳವಾರ 12.3ರಷ್ಟಿತ್ತು. ಇವು ಈ ಋತುವಿನಲ್ಲಿ ದಾಖಲಾಗಿರುವ ಎರಡು ಮತ್ತು ಮೂರನೇ ಕನಿಷ್ಠ ತಾಪಮಾನ ಎಂದು ಇಲಾಖೆ ಮಾಹಿತಿ ನೀಡಿದೆ.

ನಗರವು ಮಂಜಿನ ಹೊದಿಕೆಯಿಂದ ಆವೃತವಾದಂತಿದ್ದು, ಕೊರಯುವ ಚಳಿಗೆ ಜನರು ತತ್ತರಿಸಿದ್ದಾರೆ. ಗರಿಷ್ಠ ತಾಪಮಾನವು 27 ಡಿಗ್ರಿ ಸೆಲ್ಸಿಯಸ್ ಇದ್ದು, ಇದು ಸಾಮಾನ್ಯಕ್ಕಿಂತ 0.8ರಷ್ಟು ಕಡಿಮೆಯಾಗಿದೆ. ಹಗಲಿನಲ್ಲಿ ಆರ್ದ್ರತೆಯ ಮಟ್ಟವು ಶೇ 80ರಿಂದ 64ರಷ್ಟು ಏರಿಳಿತವಾಗಿದೆ.

ಶುಕ್ರವಾರ ತಾಪಮಾನವು ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ನಿಂದ ಕನಿಷ್ಠ 10ರಷ್ಟು ದಾಖಲಾಗಲಿದೆ ಎಂದು ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.