ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಡ್ಜ್‌ ಮೊಬೈಲ್‌ ಹ್ಯಾಕ್‌ ಮಾಡಿ ₹1.10 ಲಕ್ಷ ವಂಚನೆ

Published 18 ಜುಲೈ 2024, 14:40 IST
Last Updated 18 ಜುಲೈ 2024, 14:40 IST
ಅಕ್ಷರ ಗಾತ್ರ

ನವದೆಹಲಿ: ಮೆಸೇಜಿಂಗ್‌ ಆ್ಯಪ್‌ ಹ್ಯಾಕ್‌ ಮಾಡಿ, ಅದರಿಂದ ಸ್ನೇಹಿತರಿಗೆ ಕರೆ ಮಾಡಿ, ₹1.10 ಲಕ್ಷ ವಂಚನೆ ಮಾಡಿದ್ದಾರೆ ಎಂದು ರೋಹಿಣಿ ಜಿಲ್ಲಾ ಕೋರ್ಟ್‌ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಪ್ರಕರಣ ಸಂಬಂಧಿಸಿ ರೋಹಿಣಿ ಜಿಲ್ಲಾ ಸೈಬರ್ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ದೂರಿನಲ್ಲಿ, ‘ಜುಲೈ 11ರಂದು ಮಧ್ಯಾಹ್ನ 12:35ಕ್ಕೆ ಅನಾಮಧೇಯ ನಂಬರ್‌ನಿಂದ ಕರೆ ಬಂದಿತ್ತು. ಬ್ಯಾಂಕ್ ದಾಖಲೆಗಳನ್ನು ನೀಡಲು ಮನೆಯ ಎದುರು ‘ಕೊರಿಯರ್‌ ಬಾಯ್‌’  ಕಾಯುತ್ತಿದ್ದು, ಅವರಿಗೆ ಕರೆ ಮಾಡಿ ಎಂದು ಎಸ್‌ಎಂಎಸ್‌ ಮೂಲಕ ನಂಬರ್‌ ಕಳುಹಿಸಿದರು. ಆ ಸಂಖ್ಯೆಗೆ ಕರೆ ಮಾಡಿದ ತಕ್ಷಣವೇ ನನ್ನ ಮೆಸೇಜಿಂಗ್‌ ಆ್ಯಪ್‌ ಮತ್ತೊಂದು ಮೊಬೈಲ್‌ನಲ್ಲಿ ನೋಂದಣಿಯಾಯಿತು. ಈ ಸಂದರ್ಭದಲ್ಲಿ ಯಾರೋ ನನ್ನ ಹೆಸರಿನಲ್ಲಿ ಹಣ ಕೇಳಲು ಈ ತಂತ್ರ ಮಾಡಿದ್ದಾರೆ ಎಂಬ ಸಂಗತಿ ತಿಳಿಯಿತು. ತಕ್ಷಣವೇ ಪೊಲೀಸರಿಗೆ ಕರೆ ಮಾಡಿದೆ. ಬ್ಯಾಂಕ್‌ ಖಾತೆಯನ್ನೂ ಸ್ಥಗಿತ ಮಾಡಿಸಿದೆ. ಅಷ್ಟರಲ್ಲಿಯೇ ಅವರು ನನ್ನ ಇಬ್ಬರು ಸ್ನೇಹಿತರಿಗೆ  ₹1.10 ಲಕ್ಷ ವಂಚನೆ ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT