ಲಖನೌ (ಉತ್ತರ ಪ್ರದೇಶ): ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಗ್ರಾದ ವಿಶ್ವ ಪ್ರಸಿದ್ಧ ತಾಜ್ ಮಹಲ್ ಸ್ಮಾರಕಕ್ಕೂ ಭೇಟಿ ನೀಡುವುದರಿಂದ ಇದೇ 24ರಂದು ಸ್ಮಾರಕಕ್ಕೆ ಸಾರ್ವಜನಿಕರಪ್ರವೇಶ ನಿರ್ಬಂಧಿಸಲಾಗಿದೆ.

ಅಂದು ಟ್ರಂಪ್ ಜೊತೆ ಪ್ರಧಾನಿ ನರೇಂದ್ರ ಮೋದಿ ಕೂಡ ಆಗಮಿಸಲಿದ್ದು, ಆಗ್ರಾದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವಾಗತ ಕೋರಲಿದ್ದಾರೆ.ಇವರ ಜೊತೆ ಆಗ್ರಾ ಮೇಯರ್ ನವೀನ್ ಕೆ ಜೈನ್ ಸ್ವಾಗತಿಸಲಿದ್ದಾರೆ ಎಂದು ಎಎನ್ ಐ ವರದಿ ತಿಳಿಸಿದೆ.

ಈಗಾಗಲೆ ಇಬ್ಬರ ಹೆಸರನ್ನು ಅಮೆರಿಕಾ ಅಧ್ಯಕ್ಷರ ಭದ್ರತಾ ಪಡೆಗೆ ನೀಡಲಾಗಿದ್ದು, ಅಂತಿಮಗೊಳಿಸಲಾಗಿದೆ. ಅಂದು ಮೇಯರ್ ನವೀನ್ ಕೆ ಜೈನ್ ಅತಿಥಿ ಸತ್ಕಾರದ ಕೀಯನ್ನು ಸಾಂಕೇತಿಕವಾಗಿಟ್ರಂಪ್ ಅವರಿಗೆ ಹಸ್ತಾಂತರಿಸಲಿದ್ದಾರೆ.ಈ ವೇಳೆ ಟ್ರಂಪ್ ಅವರ ಪತ್ನಿ ಮೆಲನಿಯಾ, ಪುತ್ರಿ ಇವಾಂಕಾ, ಟ್ರಂಪ್ ಅಳಿಯಜೇರ್ಡ್ ಕುಷನರ್ ಹಾಗೂ ವೈಟ್ ಹೌಸ್‌ನ ಅಧ್ಯಕ್ಷರ ಅಧಿಕಾರಿಗಳ ತಂಡ ಭೇಟಿ ನೀಡಲಿದ್ದಾರೆ.

ಈಗಾಗಲೆ ಟ್ರಂಪ್ಸ್ವಾಗತಕ್ಕೆ ಆಗ್ರಾ ಸಿಂಗರಿಸಲ್ಪಟ್ಟಿದ್ದು,ವಿಮಾನನಿಲ್ದಾಣದಿಂದ ತಾಜಮಹಲ್ ತಲುಪುವವರೆಗೆ 'ನಮಸ್ತೆ ಟ್ರಂಪ್' ಎಂಬ ನಾಮಫಲಕಗಳು ಹಾಗೂ ಅಮೆರಿಕಾದ ರಾಷ್ಟ್ರಧ್ವಜ ರಾರಾಜಿಸುತ್ತಿವೆ.

ಇದನ್ನೂ ಓದಿ:ಟ್ರಂಪ್ ಭಾರತ ಭೇಟಿ ಹಿನ್ನೆಲೆ: ಅಹಮದಾಬಾದ್ನ ಸ್ಲಂ ಕಾಣಿಸದಂತೆ ಗೋಡೆ ನಿರ್ಮಾಣ

ಭಾರತೀಯ ಪುರಾತತ್ವ ಇಲಾಖೆಮೂಲಗಳ ಪ್ರಕಾರ, ಅಂದು ತಾಜ್ ಮಹಲ್‌ಗೆ ಬೆಳಿಗ್ಗೆ 12ರಿಂದ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ ಎಂದು ಎಎನ್ ಐ ವರದಿ ತಿಳಿಸಿದೆ.ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಎರಡು ದಿನಗಳ ಭಾರತ ಭೇಟಿಗಾಗಿ ಆಗಮಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.