ಮುಂಬೈ: ನಟಿ ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಚಕ್ರವರ್ತಿ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರ ಮನೆಯ ನಿರ್ವಾಹಕರಾಗಿದ್ದ ಸ್ಯಾಮುಯೆಲ್ ಮಿರಾಂಡ ಅವರನ್ನು ಸೆಪ್ಟೆಂಬರ್ 9ರ ವರೆಗೆ ಮಾದಕವಸ್ತು ನಿಯಂತ್ರಣ ದಳದ(ಎನ್‌ಸಿಬಿ) ಕಸ್ಟಡಿಗೆ ನೀಡಲಾಗಿದೆ.

ಬಾಲಿವುಡ್‌ನಲ್ಲಿ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ಶೋವಿಕ್ ಚಕ್ರವರ್ತಿ ಮತ್ತು ಸ್ಯಾಮುಯೆಲ್ ಮಿರಾಂಡ ಅವರನ್ನು ಎನ್‌ಸಿಬಿ ಶುಕ್ರವಾರ ವಶಕ್ಕೆ ಪಡೆದಿತ್ತು. ಅವರಿಬ್ಬರ ಸುದೀರ್ಘ ವಿಚಾರಣೆಗಾಗಿ ಏಳು ದಿನಗಳ ಕಾಲ ತಮ್ಮ ಕಸ್ಟಡಿಗೆ ನೀಡಬೇಕೆಂದು ಎನ್‌ಸಿಬಿ ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಇದಕ್ಕೆ ಒಪ್ಪಿಗೆ ಸೂಚಿಸಿರುವ ಮುಂಬೈನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಇಬ್ಬರು ಆರೋಪಿಗಳನ್ನು ಸೆ.09ರ ವರೆಗೂ ಎನ್‌ಸಿಬಿ ಕಸ್ಟಡಿಗೆ ನೀಡಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಎನ್‌ಸಿಬಿಯಿಂದ ಬಂಧಿಸಲ್ಪಟ್ಟ ಮತ್ತೊಬ್ಬ ಆರೋಪಿ ಕೈಜನ್ ಇಬ್ರಾಹಿಂ ಅವರನ್ನು ಸೆ.19ರ ವರೆಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ:ಸುಶಾಂತ್ ಆಪ್ತರಿಗೆ ಎನ್‌ಸಿಬಿ ತನಿಖೆ ಬಿಸಿ

ಶೋವಿಕ್ ಚಕ್ರವರ್ತಿ ಅವರು ಡ್ರಗ್ ಪೆಡ್ಲರ್ ಬಾಸಿತ್ ಪರಿಹಾರ್ ಜೊತೆ ಮಾದಕವಸ್ತು ಸೇವನೆ, ಸಂಗ್ರಹಣೆ, ಬಳಕೆ ಮತ್ತು ಸಾಗಣೆಗೆ ಸಂಬಂಧಿಸಿದ ಸಂದೇಶಗಳನ್ನು ಹಂಚಿಕೊಂಡಿದ್ದರ ಬಗ್ಗೆ ಎನ್‌ಸಿಬಿ ವಿಚಾರಣೆ ವೇಳೆ ತಿಳಿದುಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.