ನವದೆಹಲಿ: ಮ್ಯಾನ್ಮಾರ್ ಮೂಲಕ ಚೀನಾಗೆ ದೇಶದಿಂದ ಹವಾಲ ಜಾಲದ ಮೂಲದ ಮಾನವ ಕೂದಲು ಕಳ್ಳಸಾಗಣೆ ಹಾಗೂ ಅಕ್ರಮ ಹಣಕಾಸು ವರ್ಗಾವಣೆ ಮಾಡಿರುವ ಭಾರಿ ಪ್ರಕರಣವೊಂದನ್ನು ಜಾರಿ ನಿರ್ದೇಶನಾಲಯ (ಇಡಿ) ಪತ್ತೆ ಮಾಡಿದೆ.

ಈ ಸಂಬಂಧ ದೇಶದಾದ್ಯಂತ ಹಲವು ಕಡೆ ದಾಳಿ ನಡೆಸಿರುವ ಇಡಿ, 139 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ.

ಚೀನಾ ಮೂಲದ ಆನ್‌ಲೈನ್ ಬೆಟ್ಟಿಂಗ್ ಮೊಬೈಲ್ ಅಪ್ಲಿಕೇಶನ್ ಒಂದರ ಮೂಲಕ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುವ ಸಂದರ್ಭದಲ್ಲಿ ಈ ಜಾಲ ಪತ್ತೆಯಾಗಿದೆ. ದಾಳಿ ಸಂದರ್ಭ ₹1.20 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಹೇಳಿದೆ.

ಮ್ಯಾನ್ಮಾರ್ ಮೂಲಕ ಅಕ್ರಮವಾಗಿ, ಚೀನಾಗೆ ಭಾರತದಿಂದ ಮಾನವ ಕೂದಲು ಕಳ್ಳಸಾಗಣೆಯಾಗಿದೆ. ಅದಕ್ಕೆ ಪಾವತಿಯಾಗಿ ಭಾರಿ ಮೊತ್ತದ ನಗದನ್ನು ಹವಾಲ ಜಾಲದ ಮೂಲಕ ತಲುಪಿಸಲಾಗಿದೆ ಎಂದು ಇಡಿ ಹೇಳಿದೆ.

ಶೋಪಿಯಾನ್ ಜಿಲ್ಲೆ: ಅಂದು ಉಗ್ರ ಚಟುವಟಿಕೆ ಕಣ-ಇಂದು ಮಾದಕವಸ್ತು ಮಾರಾಟದ ತಾಣ

ಅಕ್ರಮ ರಫ್ತಿಗೆ ಅನಧಿಕೃತ ಮಾರ್ಗವನ್ನು ಬಳಸಿಕೊಂಡಿದ್ದು, ಮ್ಯಾನ್ಮಾರ್ ಗಡಿಯ ಮೂಲಕ ಚೀನಾಗೆ ಕೂದಲು ಕಳ್ಳಸಾಗಣೆಯಾಗಿದೆ. ಈ ಕುರಿತು ತನಿಖೆ ಮುಂದುವರಿದಿದೆ ಎಂದು ಇಡಿ ಹೇಳಿದೆ.

ಪ್ರಯಾಣಿಕ ದಟ್ಟಣೆ ಮಾರ್ಗಗಳಲ್ಲಿ ’ಕವಚ’ ಅಳವಡಿಕೆ: ರೈಲ್ವೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.