ನವದೆಹಲಿ: ನಿಖರ, ಕ್ಷಿಪ್ರ ಫಲಿತಾಂಶ ನೀಡುತ್ತಿರುವ ವಿದ್ಯುನ್ಮಾನ ಮತಯಂತ್ರಗಳು (ಇವಿಎಂಗಳು) ಭಾರತದ ಹೆಮ್ಮೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ಅಭಿಪ್ರಾಯಪಟ್ಟಿದ್ದಾರೆ.

ನಾಲ್ಕು ದಶಕಗಳ ಹಿಂದೆ ಇವಿಎಂಗಳನ್ನು ಪ್ರಾಯೋಗಿಕವಾಗಿ ಬಳಕೆಗೆ ತಂದಾಗಿನಿಂದ ಈ ವರೆಗೆ ಅವುಗಳು ವಿಶ್ವಾಸಾರ್ಹತೆಯನ್ನು ಸಾಬೀತು ಮಾಡಿಕೊಂಡೇ ಬಂದಿವೆ ಎಂದೂ ಅವರು ಹೇಳಿದರು.

ದೆಹಲಿಯ ಬಕ್ತಾವರಪುರದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ‘ಇಂಟಿಗ್ರೇಟೆಡ್ ಎಲೆಕ್ಷನ್ ಕಾಂಪ್ಲೆಕ್ಸ್ (ಐಇಸಿ)’ ಅನ್ನು ಸುಶೀಲ್ ಚಂದ್ರ ಅವರು ಶುಕ್ರವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ಭಾರತದಲ್ಲಿ ಈ ವರೆಗೆ ನಾಲ್ಕು ಸಂಸತ್ ಚುನಾವಣೆಗಳಲ್ಲಿ ಮತ್ತು 37 ವಿಧಾನಸಭಾ ಚುನಾವಣೆಗಳಲ್ಲಿ ಇವಿಎಂಗಳನ್ನು ಬಳಸಲಾಗಿದೆ. ನಿಖರತೆಯ ಕಾರಣಕ್ಕಾಗಿ ಅವು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಂಡಿವೆ’ ಎಂದು ಹೇಳಿದರು.

ಭಾರತದಲ್ಲಿ ಚುನಾವಣಾ ಫಲಿತಾಂಶಗಳನ್ನು ಕ್ಷಿಪ್ರವಾಗಿ ಮತ್ತು ನಿಖರವಾಗಿ ಹೇಗೆ ನೀಡಲಾಗುತ್ತಿದೆ ಎಂಬುದನ್ನು
ತಿಳಿಯಲು ಪ್ರಪಂಚದಾದ್ಯಂತದ ಅನೇಕ ದೇಶಗಳು ಉತ್ಸುಕವಾಗಿವೆ ಎಂದು ಅವರು ಹೇಳಿದರು.

ಇವಿಎಂ ತಿರುಚಲಾಗದ್ದು ಎಂದಿರುವ ಅವರು ಅವುಗಳನ್ನು ಹ್ಯಾಕ್ ಮಾಡಲೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.