ನವದೆಹಲಿ: ಕಾಂಗ್ರೆಸ್ ಆಡಳಿತ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಚತ್ತೀಸಗಢದಲ್ಲಿ ರೈತರ ಸಾಲ ಮನ್ನಾ ಎಂಬುದು ರಾಜಕೀಯ ತಂತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಸಾಲ ಮನ್ನಾ ಘೋಷಣೆಯಿಂದಾಗಿ ಹೆಚ್ಚಿನ ರೈತರಿಗೆ ಉಪಯೋಗವೇನೂ ಆಗುವುದಿಲ್ಲ. ಯಾಕೆಂದರೆ ರೈತರಲ್ಲಿ ಹೆಚ್ಚಿನವರು ಲೇವಾದೇವಿಗಾರರಿಂದ ಹಣ ಸಾಲ ಪಡೆಯುತ್ತಾರೆಯೇ ಹೊರತು ಬ್ಯಾಂಕ್‌ಗಳಿಂದಲ್ಲ ಎಂದಿದ್ದಾರೆ ಮೋದಿ.

ಈ ಹಿಂದೆ ಸಾಲ ಮನ್ನಾ ಘೋಷಣೆಯನ್ನು ಲಾಲಿಪಾಪ್‍ಗೆ ಹೋಲಿಸಿದ್ದ ಮೋದಿ, ಇಂಥಾ ಘೋಷಣೆಗಳು ಸುಳ್ಳು ಮತ್ತು ಹಾದಿ ತಪ್ಪಿಸುವಂತವುಗಳಾಗಿವೆ. ಹಾಗಾಗಿ ನಾನು ಲಾಲಿಪಾಪ್ ಎಂದಿದ್ದೆ.ಕಾಂಗ್ರೆಸ್‍ನವರು ಎಲ್ಲ ರೈತರ ಸಾಲ ಮನ್ನಾ ಮಾಡಿರುವುದಾಗಿ ಹೇಳುತ್ತಿದ್ದಾರೆ. ಆದರೆ ಸತ್ಯ ಸಂಗತಿ ಏನೆಂದರೆ ಅಂಥದ್ದೇನೂ ಆಗಿಲ್ಲ.ಅವರು ಆ ರೀತಿ ತಪ್ಪು ಮಾಹಿತಿ ನೀಡಬಾರದು. ಜವಾಬ್ದಾರಿಯುತ ರಾಜಕೀಯ ಪಕ್ಷವೊಂದು ಈ ರೀತಿ ಮಾಡುವುದು ಸರಿಯಲ್ಲ.ಸಾಲ ಮನ್ನಾ ಎಂಬುದ್ದು ರಾಜಕೀಯ ತಂತ್ರ ಎಂದು ಮೋದಿ ಅಭಿಪ್ರಾಯ ಪಟ್ಟಿದ್ದಾರೆ.

ಮಂಗಳವಾರ ಎಎನ್ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮೋದಿ, ರೈತರ ಸಮಸ್ಯೆಗೆ ಪರಿಹಾರ ಅಂದರೆ ಅವರನ್ನು ಸುದೃಢಗೊಳಿಸುವುದು.ನಮ್ಮ ಸರ್ಕಾರ ಈ ಕಾರ್ಯಕ್ಕೆ ಬದ್ದವಾಗಿದೆ ಎಂದಿದ್ದಾರೆ.

ಮೂರು ರಾಜ್ಯಗಳಲ್ಲಿ ಸಾಲ ಮನ್ನಾ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ದೇಶದಾದ್ಯಂತ ರೈತರ ಸಾಲ ಮನ್ನಾ ಮಾಡುವವರೆಗೆ ನಾವು ಪ್ರಧಾನಿ ನರೇಂದ್ರ ಮೋದಿಯವರನ್ನು ನಿದ್ದೆ ಮಾಡಲು ಅಥವಾ ವಿಶ್ರಾಂತಿ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.