ನವದೆಹಲಿ: ಸಮ್ಮತಿಯಸಲಿಂಗಕಾಮ ಅಪರಾಧಮುಕ್ತಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಗುರುವಾರ ಪ್ರತಿಕ್ರಿಯಿಸಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ’ಭಾರತೀಯ ಸೇನೆಯಲ್ಲಿ ಸಲಿಂಗಕಾಮಕ್ಕೆ ಅವಕಾಶ ಮಾಡಿಕೊಳ್ಳುವುದಿಲ್ಲ’ ಎಂದಿದ್ದಾರೆ.

'ಸೇನೆಯಲ್ಲಿಇದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಭಾರತೀಯ ಸೇನೆಸಲಿಂಗಕಾಮದ ಕುರಿತು ತನ್ನದೇ ಕಾನೂನು ಹೊಂದಿದೆ’ ಎಂದರು. ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಬಿಪಿನ್ ರಾವತ್ ಮಾತನಾಡಿದರು.

ಇದನ್ನೂ ಓದಿ:ಸಲಿಂಗ ಕಾಮ ಅಪರಾಧವಲ್ಲ; ಭಾರತೀಯ ಸೇನೆ ಇಕ್ಕಟ್ಟಿಗೆ...

’ನಾವುದೇಶದ ಕಾನೂನನ್ನು ಮೀರಿದವರಲ್ಲ. ಆದರೆ, ಭಾರತೀಯ ಸೇನೆಗೆ ಸೇರುತ್ತಿದ್ದಂತೆ ನೀವು ಅನುಭವಿಸುತ್ತಿರುವಹಕ್ಕುಗಳು ಹಾಗೂ ಅವಕಾಶಗಳಲ್ಲಿ ಕೆಲವು ಇಲ್ಲವಾಗುತ್ತವೆ. ಕೆಲವು ಕಾನೂನು ನಮಗೆ ಭಿನ್ನವಾಗಿರುತ್ತವೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:‘ಗೇ’ ಸೈನಿಕರನ್ನು ಸೇನೆ ಸಹಿಸಿಕೊಳ್ಳುವುದೇ?

‘ನಿಸರ್ಗದ ನಿಯಮಕ್ಕೆ ವಿರುದ್ಧವಾದ ಲೈಂಗಿಕ ಸಂಪರ್ಕ ಅಪರಾಧ’ ಎನ್ನುವ ಭಾರತೀಯ ದಂಡ ಸಂಹಿತೆಯ (ಐಪಿಸಿ) 377ನೇ ವಿಧಿಯನ್ನು ಸುಪ್ರಿಂಕೋರ್ಟ್ನ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠವು 2018ರ ಸೆಪ್ಟೆಂಬರ್ನಲ್ಲಿ ಅಪರಾಧ ಮುಕ್ತಗೊಳಿಸಿತ್ತು.

ಸೆ.6ರಂದು ನೀಡಿದ ತೀರ್ಪಿನಲ್ಲಿ ‘ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡಸಂಹಿತೆ (ಐಪಿಸಿ) ಸೆಕ್ಷನ್ 377 ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುತ್ತದೆ. ಸಲಿಂಗಿಗಳು, ದ್ವಿಲಿಂಗಿಗಳು ಅಥವಾ ಲಿಂಗಪರಿವರ್ತನೆ ಮಾಡಿಕೊಂಡ (ಎಲ್ಜಿಬಿಟಿಕ್ಯು) ಸಮುದಾಯದವರು ಇತರ ನಾಗರಿಕರು ಹೊಂದಿರುವಂತೆ ಸಮಾನ ಹಕ್ಕು ಪಡೆದಿರುತ್ತಾರೆ' ಎಂದು ಹೇಳಿದೆ.

ಇದನ್ನೂ ಓದಿ:ಸಲಿಂಗಕಾಮ ಅಪರಾಧಮುಕ್ತ: ಅವಿತಿದ್ದ ಆಕಾಂಕ್ಷೆಗೆ ಮಳೆಬಿಲ್ಲಿನ ತೋರಣ

ವಸಾಹತು ಆಳ್ವಿಕೆ ಕಾಲದಲ್ಲಿ ರಚನೆಯಾದ ಭಾರತೀಯ ದಂಡ ಸಂಹಿತೆಯ 497ನೇ ಸೆಕ್ಷನ್ ಅನ್ನು ರದ್ದು ಮಾಡುವ ಮೂಲಕ,ವ್ಯಭಿಚಾರವು ಅಪರಾಧ ಅಲ್ಲ ಎಂದು ಸುಪ್ರೀಂ ಕೋರ್ಟ್ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಹೇಳಿತ್ತು. ಈ ಕುರಿತೂ ರಾವತ್ ’ಶಿಸ್ತುಬದ್ಧ ಸೇನೆಯಲ್ಲಿ ಅನುಮತಿ ಇಲ್ಲ’ ಎಂದರು.

ಇದನ್ನೂ ಓದಿ:ವ್ಯಭಿಚಾರ ಅಪರಾಧವಲ್ಲ: ಸುಪ್ರೀಂಕೋರ್ಟ್ ತೀರ್ಪು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.