ನವದೆಹಲಿ: ವಿದೇಶಗಳಿಂದ ಭಾರತಕ್ಕೆ ಆಗಮಿಸುವವರಿಗೆ ಕೇಂದ್ರ ಆರೋಗ್ಯ ಸಚಿವಾಲಯವು ಗುರುವಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಈ ಹಿಂದೆ ಕಡ್ಡಾಯಗೊಳಿಸಿದ್ದ ಏಳು ದಿನಗಳ ‘ಹೋಮ್ ಕ್ವಾರಂಟೈನ್’ ಅನ್ನು ರದ್ದುಗೊಳಿಸಲಾಗಿದೆ. ಬದಲಿಗೆ, 14 ದಿನಗಳ ಸ್ವಯಂ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ.

ಹೊಸ ಮಾರ್ಗಸೂಚಿಯೂ ಫೆ. 14ರಿಂದ ಜಾರಿಗೆ ಬರಲಿದೆ. ಅಪಾಯವಿರುವ ರಾಷ್ಟ್ರಗಳು ಮತ್ತು ಇತರ ರಾಷ್ಟ್ರಗಳು ಎಂಬ ಪಟ್ಟಿಯನ್ನು ಮಾರ್ಗಸೂಚಿಯಲ್ಲಿ ತೆಗೆದುಹಾಕಲಾಗಿದೆ.

ಆರ್ಟಿಪಿಸಿಆರ್ ನೆಗೆಟಿವ್ ವರದಿಯನ್ನು ‘ಏರ್ ಸುವಿದಾ’ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡುವುದರ ಜೊತೆಗೆ (ಪ್ರಯಾಣಕ್ಕೆ 72 ಗಂಟೆಗಳ ಮೊದಲು ಮಾಡಿಸಿದ ಪರೀಕ್ಷೆ), ಪೂರ್ಣ ಲಸಿಕೆ ಪಡೆದ ಪ್ರಮಾಣಪತ್ರವನ್ನು ಅಪ್ಲೋಡ್ ಮಾಡುವ ಆಯ್ಕೆಯನ್ನು 82 ರಾಷ್ಟ್ರಗಳಿಂದ ಬರುವವರಿಗೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.