ಜೋಧಪುರ: ವಾಹನ ದಟ್ಟಣೆ ಮತ್ತು ರಸ್ತೆ ಅಪಘಾತಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಐಐಟಿ– ಜೋಧಪುರದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗವು ಪರಿಣಾಮಕಾರಿಯಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

ವಾಹನಗಳ ಸುರಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸುವುದಲ್ಲದೆ, ದೇಶದ ರಸ್ತೆಗಳಲ್ಲಿ ಎದುರಿಸುವ ಹಲವಾರು ಸವಾಲುಗಳನ್ನು ಪರಿಹರಿಸುವ ಗುರಿಯನ್ನು ಈ ತಂತ್ರಜ್ಞಾನವು ಹೊಂದಿದೆ ಎಂದು ಐಐಟಿ ಜೋಧಪುರದ ಅಸೋಸಿಯೇಟ್ ಪ್ರೊಫೆಸರ್ ದೇಬಾಶಿಶ್ ದಾಸ್ ಹೇಳಿದ್ದಾರೆ.

ರಸ್ತೆಗಳ ಪರಿಸ್ಥಿತಿ, ಅಪಘಾತಗಳ ಮಾಹಿತಿ, ವಾಹನ ದಟ್ಟಣೆ ಮೊದಲಾದವುಗಳ ಕುರಿತ ತಕ್ಷಣದ ದತ್ತಾಂಶಗಳನ್ನು ವಿನಿಮಯ ಮಾಡುವ ಮೂಲಕ ಈ ತಂತ್ರಜ್ಞಾನವು ರಸ್ತೆ ಸುರಕ್ಷತೆಗೆ ತನ್ನದೇ ಆದ ಕೊಡುಗೆ ನೀಡಲಿದೆ ಎಂದು ವಿವರಿಸಿದ್ದಾರೆ.

ಇಂತಹ ಮಾಹಿತಿಗಳು ಚಾಲಕರಿಗೆ ಅಪಾಯದಿಂದ ಪಾರಾಗಲು ನೆರವಾಗಬಹುದು ಎಂದಿದ್ದಾರೆ.

ವಾಹನಗಳ ಕುರಿತ ದತ್ತಾಂಶಗಳನ್ನು ಸಂಗ್ರಹಿಸಿ, ಅಪಘಾತಗಳು ಸಂಭವಿಸಲು ಸಾಧ್ಯತೆ ಇರುವ ಪ್ರದೇಶಗಳನ್ನು ಈ ತಂತ್ರಜ್ಞಾನವು ಗುರುತಿಸಲಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.