ಬೆಂಗಳೂರು: ಬಿಜೆಪಿಗರು ಸುಳ್ಳು ಹೇಳುವ ವಿಚಾರದಲ್ಲಿ ಪರಿಣಿತರಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.

ದೇಶದ ಗಡಿಯಲ್ಲಿ ಚೀನಾದ ಅತಿಕ್ರಮಣ ಮುಂದುವರಿದಿದೆ. ಚೀನಾದ ವಿಚಾರವಾಗಿ ದೇಶದ ಜನರು ನಿಮ್ಮಿಂದ (ಮೋದಿ) ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಪ್ರಧಾನಿ ಮೋದಿ ಅವರನ್ನು ಉತ್ತರಿಸುವಂತೆ ಕಾಂಗ್ರೆಸ್ ಕೇಳಿರುವ 10 ಪ್ರಶ್ನೆಗಳು ಇಂತಿವೆ....

1. ಚೀನಾದ ಅತಿಕ್ರಮಣದ ಬಗ್ಗೆ ಏಕೆ ಮೌನವಾಗಿರುವಿರಿ, ಪ್ರಧಾನಿ ಮೋದಿ ಚೀನಾಕ್ಕೆ ಕ್ಲೀನ್ ಚಿಟ್ ನೀಡಿದ್ದು ಏಕೆ?

2. ಲಡಾಖ್ನಲ್ಲಿ 2020ರ ಏಪ್ರಿಲ್ನಲ್ಲಿದ್ದ ಯಥಾಸ್ಥಿತಿಯನ್ನು ಯಾವಾಗ ಮರುಸ್ಥಾಪಿಸಲಾಗುತ್ತದೆ?

3. ಗಸ್ತು ಕೇಂದ್ರಗಳು ಬಫರ್ ವಲಯಗಳಾಗಿ ಏಕೆ ಮಾರ್ಪಟ್ಟವು?

4. ಚೀನಾ ಗಡಿಯಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಬಗ್ಗೆ ಮೋದಿ ಸರ್ಕಾರ ಮೌನವಾಗಿರುವುದೇಕೆ?

6. ಚೀನಾವು ಭಾರತದ ಅಧಿಕೃತ ಪ್ರದೇಶವನ್ನು ಎಷ್ಟು ಆಕ್ರಮಿಸಿದೆ?

7. ಪಿಎಂ ಕೇರ್ ಫಂಡ್ಗೆ ಚೀನಾದ ಯಾವ ಕಂಪನಿಗಳು ಎಷ್ಟು ಹಣ ನೀಡಿವೆ?

8. ಪ್ರಧಾನಿ ಮೋದಿ 18 ಬಾರಿ ಚೀನಾ ನಾಯಕರನ್ನು ಭೇಟಿ ಮಾಡಿದ್ದು ಏಕೆ, ಏನಾಯಿತು?

9. ಬಿಜೆಪಿ ನಾಯಕರು ಯಾವ ತರಬೇತಿಗಾಗಿ ಚೀನಾಕ್ಕೆ ಹೋಗುತ್ತಾರೆ?

10. ಚೀನಾದೊಂದಿಗಿನ ದೇಶದ ವ್ಯಾಪಾರ ಕೊರತೆಯು 100 ಬಿಲಿಯನ್ ಏಕೆ ದಾಟಿದೆ?

ಇವನ್ನೂ ಓದಿ...

* ಭ್ರಷ್ಟಾಚಾರ ಆರೋಪ | ಸಿದ್ದರಾಮಯ್ಯನವರೇ, ಚೆಲುವರಾಯಸ್ವಾಮಿ ಏನು ಕ್ರಮ ಕೈಗೊಳ್ಳುವಿರಿ: ಬಿಜೆಪಿ ಪ್ರಶ್ನೆ

* ಕೃಷಿ ಸಚಿವ ಚಲುವರಾಯಸ್ವಾಮಿ ಮೇಲೆ ಲಂಚದ ಆರೋಪ: ತನಿಖೆಗೆ ಒತ್ತಾಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.