ಶ್ರೀನಗರ: ‘ಬಾಂಗ್ಲಾದೇಶದಲ್ಲಿನ ಬೆಳವಣಿಗೆಗಳನ್ನು ಭಾರತ ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ಎಚ್ಚರಿಕೆಯಿಂದ ಇರಬೇಕು’ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಎಚ್ಚರಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯೂ ಆದ ಅವರು, ‘ಬಾಂಗ್ಲಾದೇಶಕ್ಕೆ ಇಂದು ಎದುರಾಗಿರುವ ಸ್ಥಿತಿಯೇ ನಮಗೂ ಆಗಲಿದೆ ಎಂದು ಎಲ್ಲ ಸರ್ವಾಧಿಕಾರಿಗಳು ನೆನಪಿಡಬೇಕು’ ಎಂದರು.

ನೆರೆಯ ಬಾಂಗ್ಲಾದೇಶವು ಈಗ ಎದುರಾಗಿರುವ ಸಂಕಷ್ಟದಿಂದ ಹೊರಬರಲಿದೆ ಹಾಗೂ ಭಾರತದ ಜೊತೆಗೆ ಅದರ ಬಾಂಧವ್ಯವು ದೃಢವಾಗಲಿದೆ ಎಂದು ಮಂಗಳವಾರ ಅವರು ಆಶಿಸಿದರು.

‘ಬಾಂಗ್ಲಾದಲ್ಲಿ ಹಲವು ವರ್ಷಗಳಿಂದಲೂ ಅನಿಶ್ಚಿತವಾದ ಪರಿಸ್ಥಿತಿ ಇತ್ತು. ಇದಕ್ಕೆ ಹಲವು ಕಾರಣಗಳಿವೆ. ನಿರುದ್ಯೋಗ ಸಮಸ್ಯೆ ಪ್ರಮುಖ ಕಾರಣವಾಗಿತ್ತು. ದೇಶದ ಆರ್ಥಿಕತೆಯೂ ದುಃಸ್ಥಿತಿಯಲ್ಲಿತ್ತು. ಈ ಎಲ್ಲವೂ ಸೇರಿ ಸರ್ಕಾರದ ಪದಚ್ಯುತಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ವಿಶ್ಲೇಷಿಸಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ಚುನಾವಣಾ ಆಯೋಗದ ಭೇಟಿ ಕುರಿತ ಪ್ರಶ್ನೆಗೆ, ‘ಅದರಲ್ಲಿ ಹೊಸತೇನಿಲ್ಲ ಅವರು ಬರಲೇಬೇಕು. ಚುನಾವಣೆಗೆ ದಿನಾಂಕ ನಿಗದಿಪಡಿಸಬೇಕು. ಅದು ಅವರ ಕೆಲಸ’ ಎಂದು ಪ್ರತಿಕ್ರಿಯಿಸಿದರು.
.PHOTOS | ಶೇಖ್ ಹಸೀನಾ ನಿವಾಸದಲ್ಲಿ ಸಿಕ್ಕ ಸಿಕ್ಕಿದ್ದನ್ನು ದೋಚಿದ ಪ್ರತಿಭಟನಕಾರರು.ಬಾಂಗ್ಲಾದೇಶ | ಶೇಖ್ ಹಸೀನಾ ಪಲಾಯನ: ಲೇಖಕಿ ತಸ್ಲಿಮಾ ನಸ್ರೀನ್ ವ್ಯಂಗ್ಯ.Bangla Unrest: ಬ್ರಿಟನ್ಗೆ ತೆರಳುವವರೆಗೆ ಹಸೀನಾಗೆ ಭಾರತದಲ್ಲೇ ಆಶ್ರಯ?.Bangla Unrest | ಸಂಯಮ ಕಾಪಾಡಿಕೊಳ್ಳುವಂತೆ ಜನರಿಗೆ ಕರೆ ನೀಡಿದ ತಾರಿಕ್ ರೆಹಮಾನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.