ಕೊಲ್ಕತ್ತಾ: ಕೊಲ್ಕತ್ತಾದ ಜಾಧವ್‌ಪುರ್ ವಿಶ್ವವಿದ್ಯಾನಿಲಯದಎಬಿವಿಪಿ ಸಂಘಟನೆ ಆಯೋಜಿಸಿದ್ದ ಸೆಮಿನಾರ್‌ನಲ್ಲಿ ಭಾಗವಹಿಸಲು ಆಗಮಿಸಿದ್ದ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಅವರಿಗೆ ಅಲ್ಲಿನ ವಿದ್ಯಾರ್ಥಿಗಳು ಕಪ್ಪು ಬಾವುಟ ಪ್ರದರ್ಶಿಸಿ, ಬಾಬುಲ್ ಸುಪ್ರಿಯೋ ಗೋ ಬ್ಯಾಕ್ ಎಂದು ಘೋಷಣೆ ಕೂಗಿದ್ದಾರೆ.

ವಿಶ್ವವಿದ್ಯಾನಿಲಯದೊಳಗೆ ಪ್ರವೇಶಿಸದಂತೆ ವಿದ್ಯಾರ್ಥಿಗಳು ಸಚಿವರಿಗೆ ತಡೆಯೊಡ್ಡಿದ್ದು, ಸುಮಾರು ಒಂದು ಗಂಟೆ ಕಾಲ ಈ ಪ್ರತಿಭಟನೆ ನಡೆದಿದೆ. ಎಡಪಕ್ಷದ ವಿದ್ಯಾರ್ಥಿ ಸಂಘಟನೆಗಳಾದ ಎಎಫ್‌ಎಸ್‌ಯು ಮತ್ತು ಎಸ್‌ಎಫ್‌ಐ ಸಚಿವರ ವಿರುದ್ದ ಘೋಷಣೆ ಕೂಗಿ ಪ್ರತಿಭಟಿಸಿದೆ.

ಇದನ್ನೂ ಓದಿ:ಹಿಂಸಾಚಾರಗಳಿಗೆ ಮಮತಾ ನೇರ ಹೊಣೆ: ಬಾಬುಲ್ ಸುಪ್ರಿಯೊ

ಸಂಜೆ 5 ಗಂಟೆ ಸಚಿವರು ಕಾಲೇಜು ಕ್ಯಾಂಪಸ್‌ನಿಂದ ಹೊರಗೆ ಹೋಗುವ ಹೊತ್ತಿನಲ್ಲಿಯೂ ವಿದ್ಯಾರ್ಥಿ ಸಂಘಟನೆಗಳು ಘೋಷಣೆ ಕೂಗಿ ಪ್ರತಿಭಟಿಸಿವೆ. ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ತನ್ನ ಕೂದಲು ಎಳೆದು ಹಿಂಸೆ ನೀಡಿದ್ದಾರೆ ಎಂದು ಸಚಿವರು ಆರೋಪಿಸಿದ್ದಾರೆ.

ನಾನು ರಾಜಕಾರಣ ಮಾಡುವುದಕ್ಕಾಗಿ ಇಲ್ಲಿಗೆ ಬಂದಿಲ್ಲ. ಆದರೆ ಅಲ್ಲಿನ ಕೆಲವು ವಿದ್ಯಾರ್ಥಿಗಳ ವರ್ತನೆ ನನಗೆ ಬೇಸರವುಂಟು ಮಾಡಿದೆ. ಅವರು ನನ್ನ ಕೂದಲು ಎಳೆದು, ನೂಕಿದ್ದಾರೆ ಎಂದು ಸುಪ್ರಿಯೊ ಹೇಳಿರುವುಗಾಗಿ ಪಿಟಿಐ ವರದಿ ಮಾಡಿದೆ.

ವಿದ್ಯಾರ್ಥಿಗಳನ್ನು ನಾನು ಬಹಿರಂಗವಾಗಿ ನಕ್ಸಲ್ ಎಂದು ಕರೆಯಲಿ ಎಂಬಂತೆ ಅವರು ನನ್ನನ್ನು ಕೆರಳಿಸುತ್ತಿದ್ದರು ಎಂದು ಸುಪ್ರಿಯೊ ದೂರಿದ್ದಾರೆ.

ಸಚಿವರ ಕಾರಿಗೆ ತಡೆಯೊಡ್ಡಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಕಾಲೇಜಿನ ಪ್ರವೇಶ ದ್ವಾರದ ಮುಂದೆ ಪ್ರತಿಭಟನೆ ನಿರತ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಲು ಜಾಧವ್‌ಪುರ್ ವಿವಿಯ ಉಪ ಕುಲಪತಿ ಸುರಂಜನ್ ದಾಸ್ ಅವರು ಯತ್ನಿಸಿದರೂ ವಿದ್ಯಾರ್ಥಿಗಳು ಗೇಟ್ ಬಿಟ್ಟು ಕದಲಲಿಲ್ಲ ಎಂದು ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ:ಕಾಲು ಮುರಿದು ಊರುಗೋಲು ಕೊಡುತ್ತೇನೆ ಎಂದು ಧಮಕಿ ಹಾಕಿದ ಕೇಂದ್ರ ಸಚಿವ

ಅವರೆಷ್ಟೇ ಪ್ರಯತ್ನಿಸಿದರೂ ನನ್ನನ್ನು ಕೆರಳಿಸಲು ಸಾಧ್ಯವಾಗಲ್ಲ. ಪ್ರಜಾಪ್ರಭುತ್ವವನ್ನು ಜೀವಂತವಾಗಿರಿಸುವಲ್ಲಿ ವಿಪಕ್ಷಗಳ ಪಾತ್ರವಿದೆ. ಅಧಿಕಾರದಲ್ಲಿರುವ ಪಕ್ಷ ಭಿನ್ನಾಭಿಪ್ರಾಯಗಳನ್ನು ಆಲಿಸುವ ಅಗತ್ಯವೂ ಇದೆ ಎಂದು ಸುಪ್ರಿಯೊ ಟ್ವೀಟಿಸಿದ್ದು ಅದು ಕಾಲ್ತುಳಿತದ ರೀತಿಯಪರಿಸ್ಥಿತಿಯಾಗಿತ್ತು ಎಂದಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆ ವಿಷಯವನ್ನುಗಂಭೀರವಾಗಿ ಪರಿಗಣಿಸಲಾಗುವುದು ಎಂದು ಪಶ್ಚಿಮ ಬಂಗಾಳದ ಗವರ್ನರ್ ಜಗದೀಪ್ ಧನ್ಕಾರ್ ಹೇಳಿರುವುದಾಗಿ ಅವರ ಮಾಧ್ಯಮ ಕಾರ್ಯದರ್ಶಿ ಪತ್ರಕರ್ತರಲ್ಲಿ ಹೇಳಿದ್ದಾರೆ.

ಈ ವಿಷಯದ ಬಗ್ಗೆ ತಕ್ಷಣವೇ ಪರಿಶೀಲಿಸಿ ಎಂದು ನಗರ ಪೊಲೀಸ್ ಆಯುಕ್ತರಿಗೆ ಆದೇಶಿಸಿರುವುದಾಗಿ ಕುಲಪತಿ ಮಲಯ್ ಡೇ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.