ಕೋಟ: ರಾಜಸ್ಥಾನದ ಕೋಟದಲ್ಲಿ ಪಿಜಿಯಲ್ಲಿ ವಾಸವಿದ್ದ 16 ವರ್ಷದ ಜೆಇಇ ಪರೀಕ್ಷಾ ಆಕಾಂಕ್ಷಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲಿಸರು ಸೋಮವಾರ ತಿಳಿಸಿದ್ದಾರೆ.

ಬಿಹಾರದ ಪಟ್ನಾ ಮೂಲದ ಆರ್ತಯ್ ರಂಜನ್ ಮೃತ ವಿದ್ಯಾರ್ಥಿ. ಈತ ಕಳೆದ ಒಂದೂವರೆ ವರ್ಷದಿಂದ ಐಐಟಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅಗತ್ಯವಿರುವ ಜೆಇಇ ಪ್ರವೇಶ ಪರೀಕ್ಷೆಗೆ ಇಲ್ಲಿ ತರಬೇತಿ ಪಡೆಯುತ್ತಿದ್ದ.

ಆರ್ತಯ್ ಅತೀವ ಮೈಗ್ರೇನ್ ಸಮಸ್ಯೆ ಹೊಂದಿದ್ದು ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದ, ಮೈಗ್ರೇನ್ನಿಂದಲೇ ಆತ ಮೃತಪಟ್ಟಿದ್ದಾನೆ ಎಂದಿರುವ ಕುಟುಂಬ ಸದಸ್ಯರು, ಮರಣೋತ್ತರ ಪರೀಕ್ಷೆ ನಡೆಸಲು ನಿರಾಕರಿಸಿದ್ದಾರೆ. ಅಲ್ಲದೆ ಆರ್ತಯ್ ತಾಯಿಯೊಂದಿಗೆ ಪಿಜಿಯಲ್ಲಿ ವಾಸವಿದ್ದ.

‘ಶನಿವಾರ ರಾತ್ರಿಯಿಡೀ ಓದಿದ ಈತ, ಭಾನುವಾರ ಬೆಳಿಗ್ಗೆ ತಿಂಡಿ ತಿಂದು ಮಾತ್ರೆ ಸೇವಿಸಿ ಮಲಗಿದ್ದ . ಮಧ್ಯಾಹ್ನದ ವೇಳೆಗ ಆತ ಪ್ರಜ್ಞಾಹೀನನಾಗಿದ್ದ. ಆತನ ಬಾಯಿಯಿಂದ ನೊರೆ ಬರುತ್ತಿತ್ತು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ’ ಎಂದು ಆರ್ತಯ್ ತಾಯಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

‘ಪ್ರಾಥಮಿಕ ವರದಿಗಳ ಪ್ರಕಾರ ಆತ್ಮಹತ್ಯೆಯಲ್ಲ. ಆತ ಮೈಗ್ರೇನ್ ಸಮಸ್ಯೆ ಹೊಂದಿದ್ದು, ಅದಕ್ಕೆ ಚಿಕಿತ್ಸೆಯನ್ನೂ ಪಡೆಯುತ್ತಿದ್ದ. ವೈದ್ಯರು ತಪಾಸಣೆ ಮಾಡಿ ಹೃದಾಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆಯಿದೆ ಎಂದಿದ್ದಾರೆ. ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ’ ಎಂದು ಡಿಎಸ್ಪಿ ಶರ್ಮಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.