ನವದೆಹಲಿ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ)ದ 2019-2021ರ ನಡುವಿನ ಅಂಕಿಅಂಶಗಳು ಸೋಮವಾರ ಬಿಡುಗಡೆಯಾಗಿವೆ. ಉತ್ತರ ಪ್ರದೇಶದಲ್ಲಿ 2021ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿವೆ.

ಇದನ್ನೂ ಓದಿ:ಪತ್ರಕರ್ತರ ಮೇಲೆ ಹಲ್ಲೆ: ಎನ್‌ಸಿಆರ್‌ಬಿ ನಿರ್ಲಕ್ಷ್ಯ ಬಟಾಬಯಲು ಮಾಡಿದ ಕೇಂದ್ರ!

ಕಳೆದ ವರ್ಷ ಉತ್ತರ ಪ್ರದೇಶದಲ್ಲಿ ದಾಖಲಾದ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ 56,083. ಇದು ದೇಶದಲ್ಲೇ ಅತಿ ಹೆಚ್ಚು ಎನಿಸಿಕೊಂಡಿದೆ.

ಉತ್ತರ ಪ್ರದೇಶದ ನಂತರ ರಾಜಸ್ಥಾನದಲ್ಲಿ 40,738 ಪ್ರಕರಣಗಳು ದಾಖಲಾಗಿವೆ. 39,526 ಪ್ರಕರಣಗಳೊಂದಿಗೆ ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ. ಪಶ್ಚಿಮ ಬಂಗಾಳ (35,884) ಮತ್ತು ಒಡಿಶಾ (31,352) ನಂತರದ ಸ್ಥಾನದಲ್ಲಿವೆ.

2021ರಲ್ಲಿ ಕರ್ನಾಟಕದಲ್ಲಿ 14,468 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲವಾಗಿವೆ ಎಂದು ಎನ್‌ಸಿಆರ್‌ಬಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ದೆಹಲಿಯಲ್ಲಿ 14,277 ಪ್ರಕರಣಗಳು ವರದಿಯಾಗಿದ್ದವು.

ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ನಗರ ಎನಿಸಿಕೊಂಡಿರುವ ರಾಷ್ಟ್ರ ರಾಜಧಾನಿಯಲ್ಲಿ ಕಳೆದ ವರ್ಷ ಪ್ರತಿದಿನ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿರುವುದು ಎನ್‌ಸಿಆರ್‌ಬಿ ವರದಿಯಲ್ಲಿ ಬಹಿರಂಗಗೊಂಡಿದೆ.

ಇವುಗಳನ್ನೂ ಓದಿ

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಆತ್ಮಹತ್ಯೆ: 5ನೇ ಸ್ಥಾನದಲ್ಲಿ ಕರ್ನಾಟಕ

ಪೋಕ್ಸೋ: ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳೇ ಶೇ 99 ರಷ್ಟು -ಎನ್‌ಸಿಆರ್‌ಬಿ

ಲಿಂಗಪರಿವರ್ತಿತ ಕೈದಿಗಳ ಮಾಹಿತಿ ಇಲ್ಲ: ಎನ್‌ಸಿಆರ್‌ಬಿ

ವಿದೇಶಿಯರ ವಿರುದ್ಧ ಅಪರಾಧ: ದೆಹಲಿಯಲ್ಲಿಯೇ ಅಧಿಕ- ಎನ್‌ಸಿಆರ್‌ಬಿ ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.