ಬೆಂಗಳೂರು: ಲೋಕಸಭೆಯ ಕಲಾಪದ ವೇಳೆಯೇ ಒಳನುಗ್ಗಿದ ಪ್ರಕರಣದಲ್ಲಿ ಗುರುತಿಸಿಕೊಂಡಿರುವ ಆರೋಪಿಗಳಲ್ಲಿ ಒಬ್ಬನಾದ ಮನೋರಂಜನ್, ಮೈಸೂರಿನವನು.

34 ವರ್ಷದ ಮನೋರಂಜನ್ ಮೈಸೂರಿನ ವಿಜಯನಗರ 2ನೇ ಹಂತದ ನಿವಾಸಿಯಾಗಿರುವ ದೇವರಾಜೇ ಗೌಡ ಅವರ ಪುತ್ರ.
.Lok Sabha Security Breach: ಲೋಕಸಭೆಯಲ್ಲಿ ಆಗಿದ್ದೇನು? ಬಂಧಿತರು ಯಾರೆಲ್ಲಾ?.PHOTOS: ಲೋಕಸಭೆಯಲ್ಲಿ ಭದ್ರತಾ ಲೋಪ; ಹಳದಿ ಬಣ್ಣದ ಹೊಗೆ ಸಿಂಪಡಣೆ, ನಾಲ್ವರ ಬಂಧನ.
ಮೈಸೂರಿನಲ್ಲಿ ಹುಟ್ಟಿ, ಅಲ್ಲಿಯೇ ಪ್ರಾಥಮಿಕ ಹಾಗೂ ಪದವಿಪೂರ್ವ ಶಿಕ್ಷಣ ಪಡೆದಿದ್ದ.

ಮನೋರಂಜನ್ ಮೂಲತಃ ಹಾಸನ ಜಿಲ್ಲೆ ಅರಕಲಗೂಡಿನ ಮಲ್ಲಾಪುರ ಗ್ರಾಮದವನಾಗಿದ್ದು, ಬೆಂಗಳೂರಿನ ಬಿಐಟಿ ಕಾಲೇಜಿನಿಂದ ಬಿಇ ಪದವಿ ಪಡೆದು ಮನೆಯಲ್ಲಿದ್ದ ಎಂದು ತಿಳಿದು ಬಂದಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅರೋಪಿಯ ತಂದೆ, ದೇವರಾಜೇ ಗೌಡ, 'ಮಗ, ಸಮಾಜದ ಬಗ್ಗೆ ಒಲವು ಹೊಂದಿದ್ದ. ನೊಂದವರಿಗೆ ಸಹಾಯ ಮಾಡಬೇಕೆಂಬ ಮನೋಭಾವವಿತ್ತು. ಮನೆಯಲ್ಲಿದ್ದ ಪುಸ್ತಕಗಳನ್ನು ಹೆಚ್ಚು ಓದುತ್ತಿದ್ದ. ಆಗಾಗ ದೆಹಲಿ, ಬೆಂಗಳೂರಿಗೆ ತೆರಳುತ್ತಿದ್ದ. ತಪ್ಪು ಮಾಡಿದ್ದರೆ ಗಲ್ಲುಶಿಕ್ಷೆಯಾಗಲಿ' ಎಂದರು.
.Lok Sabha – ಪ್ರತಾಪ್ ಸಿಂಹ ಬುದ್ಧಿವಂತ, ಅದು ಹೆಂಗೆ ಪಾಸ್ ಕೊಟ್ಟ - ಡಿಕೆಶಿ .
ಮನೋರಂಜನ್ ಮನೆಗೆ ಎಸಿಪಿ ಭೇಟಿ

ಮನೋರಂಜನ್ ಅವರ ವಿಜಯನಗರದಲ್ಲಿರುವ 2ನೇ ಹಂತದಲ್ಲಿರುವ ನಿವಾಸಕ್ಕೆ ವಿಜಯನಗರ ಉಪ ವಿಭಾಗದ ಉಪ ಪೊಲೀಸ್ ಆಯುಕ್ತ ಗಜೇಂದ್ರ ಪ್ರಸಾದ್ ಭೇಟಿ ನೀಡಿ ಅವರ ತಂದೆ ದೇವರಾಜೇ ಗೌಡ ಅವರಿಂದ ಮಗನ ಬಗ್ಗೆ ಮಾಹಿತಿ ಪಡೆದರು.
.ಪ್ರತಾಪ ಸಿಂಹ ಪಾಸ್ ನೀಡಿದ್ದರೆ ಅವರನ್ನು ವಿಚಾರಣೆಗೆ ಒಳಪಡಿಸಬೇಕು: ಸಿದ್ದರಾಮಯ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.