ಭೋಪಾಲ್: ಕಾಂಗ್ರೆಸ್ ಮುಖಂಡ ಹಾಗೂ ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ ಕಮಲ್‌ನಾಥ್ ಅವರು ಪುತ್ರ ಹಾಗೂ ಸಂಸದ ನಕುಲ್ ನಾಥ್ ಅವರೊಂದಿಗೆ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ ಎಂಬ ಊಹಾಪೋಹಗಳ ನಡುವೆಯೇ ಕಮಲ್‌ನಾಥ್ ಬಣದ ಕೆಲವು ಶಾಸಕರು ದೆಹಲಿಗೆ ತೆರಳಿದ್ದಾರೆ.

ಕಮಲ್‌ನಾಥ್‌ಗೆ ನಿಷ್ಠರಾಗಿರುವ ಮಾಜಿ ಸಚಿವ ಲಖನ್ ಘಂಗೊರಿಯ ಕೂಡಾ ದೆಹಲಿಗೆ ತೆರಳಿದ್ದಾರೆ. ದೆಹಲಿಗೆ ತೆರಳಿರುವ ಶಾಸಕರು ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

‘ಕಮಲ್‌ನಾಥ್ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೈಬಿಟ್ಟಿರುವುದಕ್ಕೆ ನಮಗೆ ನೋವಾಗಿದೆ. ಅವರು ಯಾವುದೇ ನಿರ್ಧಾರ ಕೈಗೊಂಡರು ನಾವು ಬದ್ಧರಾಗಿರುತ್ತೇವೆ’ ಎಂದು ಮಾಜಿ ಸಚಿವ ದೀಪಕ್ ಸಕ್ಸೇನಾ ತಿಳಿಸಿದ್ದಾರೆ.

ಕಮಲ್‌ನಾಥ್ ಆಪ್ತ ಮಾಜಿ ಸಚಿವ ವಿಕ್ರಮ್ ವರ್ಮ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ‘ಜೈ ಶ್ರೀರಾಮ್’ ಎಂದು ಬರೆದುಕೊಂಡಿದ್ದಾರೆ.

ಪಕ್ಷಾಂತರ ನಿಷೇಧ ಕಾಯ್ದೆಗೆ ಗುರಿಯಾಗುವುದನ್ನು ತಪ್ಪಿಸಲು ಕಮಲ್‌ನಾಥ್ ಬಣವು 23 ಶಾಸಕರ ಬೆಂಬಲ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ನ ಕೆಲವರು ಆರೋಪಿಸಿದ್ದಾರೆ.

230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್ 66 ಸ್ಥಾನಗಳನ್ನು ಹೊಂದಿದೆ.

ಕಾಂಗ್ರೆಸ್‌ನ 66 ಮಂದಿ ಶಾಸಕರಲ್ಲಿ ಕನಿಷ್ಠ 12 ಮಂದಿ ತಮ್ಮ ಜೊತೆಗಿದ್ದಾರೆ ಎಂದು ಕಮಲ್‌ನಾಥ್ ಹೇಳಿಕೊಂಡಿದ್ದಾರೆ.

2020ರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರ ಆಪ್ತ ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಕಾರಣ ಮಧ್ಯಪ್ರದೇಶದಲ್ಲಿ ಕಮಲ್‌ನಾಥ್ ಅವರ ಸರ್ಕಾರ ಪತನಗೊಂಡಿತ್ತು.
.ಕಮಲ್‌ನಾಥ್ ಕಾಂಗ್ರೆಸ್ ತೊರೆಯುವ ಊಹಾಪೋಹ: ಸಂಜಯ್ ರಾವುತ್ ಹೇಳಿದ್ದು ಹೀಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.