ನವದೆಹಲಿ/ ಮುಂಬೈ: ಭಾರತೀಯ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬರುವುದು ಮುಂದುವರಿದಿದೆ. ಇಂದು(ಶುಕ್ರವಾರ) ಕೂಡ 25 ಕ್ಕೂ ಹೆಚ್ಚು ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇಂಡಿಗೋ, ವಿಸ್ತಾರ ಮತ್ತು ಸ್ಪೈಸ್ ಜೆಟ್ನ ತಲಾ 7 ವಿಮಾನಗಳಿಗೆ ಹಾಗೂ ಏರ್ ಇಂಡಿಯಾದ 6 ವಿಮಾನಗಳಿಗೆ ಬೆದರಿಕೆಗಳು ಬಂದಿವೆ.

ಇಂಡಿಗೋದ 6E 87 ವಿಮಾನ (ಕೋಯಿಕ್ಕೋಡ್– ದಮ್ಮಾಮ್), 6E 2099 (ಉದಯಪುರ–ದೆಹಲಿ), 6E 11 (ದೆಹಲಿ– ಇಸ್ತಾಂಬುಲ್), 6E 58 (ಜಿದ್ದಾ–ಮುಂಬೈ), 6E 17 (ಮುಂಬೈ–ಇಸ್ತಾಂಬುಲ್), 6E 108 (ಹೈದರಾಬಾದ್–ಚಂಡೀಗಢ) ಮತ್ತು 6E 133 (ಪುಣೆ–ಜೋಧಪುರ) ವಿಮಾನಗಳಿಗೆ ಬೆದರಿಕೆ ಸಂದೇಶಗಳು ಬಂದಿವೆ ಎಂದು ಇಂಡಿಗೋ ವಕ್ತಾರರು ತಿಳಿಸಿದ್ದಾರೆ.

12 ದಿನಗಳಲ್ಲಿ, 275 ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ವಿಮಾನಯಾನ ಸಂಸ್ಥೆಗಳಿಗೆ ಬರುತ್ತಿರುವ ಹುಸಿ ಬಾಂಬ್ ಬೆದರಿಕೆ ಸಂದೇಶಗಳು ಮತ್ತು ಕರೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಇವುಗಳ ಹಿಂದಿರುವವರನ್ನು ಗುರುತಿಸಲು ಪ್ರಾರಂಭಿಸಿದೆ.

ಈ ರೀತಿಯ ಸಂದೇಶಗಳ ಕುರಿತು ಮಾಹಿತಿ ಹಂಚಿಕೊಳ್ಳುವಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಮೆಟಾ ಮತ್ತು ಎಕ್ಸ್ಗೆ ಸೂಚನೆ ನೀಡಿದೆ.
.ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಮೂಲ ಪತ್ತೆಯಾಗಲಿ, ಸಮಸ್ಯೆ ಕೊನೆಗೊಳ್ಳಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.