ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ನಿಷೇಧವನ್ನು ಸಮರ್ಥಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಅರವಿಂದ ಕೇಜ್ರಿವಾಲ್, ಮಾಲಿನ್ಯದಿಂದ ಜನರನ್ನು ರಕ್ಷಿಸಲು ಇದು ಅವಶ್ಯಕವಾಗಿದ್ದು, ಹಿಂದೂ-ಮುಸ್ಲಿಂ ಧೋರಣೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹಿಂದೂಗಳ ಹಬ್ಬವನ್ನು ಗುರಿಯಾಗಿಸಿ ಪಟಾಕಿ ಮೇಲೆ ನಿಷೇಧ ಹೇರಲಾಗಿದೆ ಎಂಬ ಬಿಜೆಪಿ ಮತ್ತು ಆರ್ಎಸ್ಎಸ್ ಟೀಕೆಯನ್ನು ಕೇಜ್ರಿವಾಲ್ ತಳ್ಳಿ ಹಾಕಿದರು.

'ಇದರಲ್ಲಿ ಹಿಂದೂ-ಮುಸ್ಲಿಂ ಧೋರಣೆಯೇ ಇಲ್ಲ. ಪ್ರತಿಯೊಬ್ಬರೂ ಉಸಿರಾಡುವುದು ಮತ್ತು ಪ್ರಾಣ ಮುಖ್ಯ' ಎಂದು ಅವರು ಹೇಳಿದರು.

'ಮಾಲಿನ್ಯದ ದೃಷ್ಟಿಯಿಂದ ಜನರು ಪಟಾಕಿ ಸಿಡಿಸುವುದನ್ನು ತಡೆಯಬೇಕು ಮತ್ತು ದೀಪಗಳನ್ನು ಬೆಳಗಿಸಬೇಕು ಎಂದು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಪ್ರತಿಪಾದಿಸಿವೆ' ಎಂದು ಅವರು ಉಲ್ಲೇಖಿಸಿದರು.

'ದೀಪಾವಳಿ ಬೆಳಕಿನ ಹಬ್ಬವಾಗಿದ್ದು, ಮಾಲಿನ್ಯಕ್ಕೆ ಕಾರಣವಾಗುವ ಪಟಾಕಿಗಳನ್ನು ಸಿಡಿಸುವ ಬದಲು ದೀಪ ಮತ್ತು ಮೇಣದ ಬತ್ತಿಗಳನ್ನು ಬೆಳಗಿಸುವ ಮೂಲಕ ಹಬ್ಬವನ್ನು ಆಚರಿಸಿಕೊಳ್ಳಬೇಕು' ಎಂದು ಕೇಜ್ರಿವಾಲ್ ಹೇಳಿದರು.

'ನಾವು ಯಾರ ಪರವಾಗಿಯೂ ಇಲ್ಲ. ನಮ್ಮೆಲ್ಲರ ಪರವಾಗಿಯೇ ಇದನ್ನು ಮಾಡಿದ್ದೇವೆ. ಕೊನೆಯದಾಗಿ ಪಟಾಕಿಯಿಂದ ಉಂಟಾಗುವ ಮಾಲಿನ್ಯದಿಂದ ನಮ್ಮ ಮಕ್ಕಳು ತೊಂದರೆ ಅನುಭವಿಸಲಿದ್ದಾರೆ' ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಾಯು ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿ ದೆಹಲಿ ಸರ್ಕಾರ ಆದೇಶ ಹೊರಡಿಸಿದೆ. 2025ರ ಜನವರಿ 1ರವರೆಗೆ ಇದು ಜಾರಿಯಲ್ಲಿರುತ್ತದೆ.
.ಜನವರಿ 1ರವರೆಗೆ ಪಟಾಕಿ ಉತ್ಪಾದನೆ, ಮಾರಾಟ ನಿಷೇಧಿಸಿದ ದೆಹಲಿ ಸರ್ಕಾರ .ಪಟಾಕಿ ನಿಷೇಧಕ್ಕೆ ದೆಹಲಿ ಸರ್ಕಾರ ನಿರ್ಧಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.