ಐಜ್ವಾಲ್: ‘ಈಶಾನ್ಯ ಭಾರತ ಸದಾ ಒಂದಾಗಿರುತ್ತದೆ’ ಎಂದು ಮಿಜೋರಾಂ ಮುಖ್ಯಮಂತ್ರಿ ಝೋರಮ್ತಂಗಾ ಟ್ವೀಟ್ ಮಾಡಿದ್ದಾರೆ.

ಅಸ್ಸಾಂನ ಕಚಾರ್ ಜಿಲ್ಲೆಯ ಗಡಿಭಾಗದಲ್ಲಿರುವ ಮಿಜೋರಾಂನ ಕೊಲಾಸಿಬ್ ಜಿಲ್ಲೆಯಲ್ಲಿ ಬೇರೆ ಪ್ರದೇಶಗಳ ಜನರ ಓಡಾಟಕ್ಕೆ ಯಾವುದೇ ನಿರ್ಬಂಧ ಹೇರಲಾಗಿಲ್ಲ ಎಂದು ಹೇಳಿರುವ ಅಧಿಸೂಚನೆಯೊಂದನ್ನು ಜೋರಾಮ್ಥಾಂಗಾ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.

ಅಸ್ಸಾಂ–ಮಿಜೋರಾಂ ಹಿಂಸಾಚಾರದ ಹಿನ್ನೆಲೆಯಲ್ಲಿ ಮಿಜೋರಾಂಗೆ ಪ್ರಯಾಣಿಸದಂತೆ ತನ್ನ ರಾಜ್ಯದ ನಿವಾಸಿಗಳಿಗೆ ಅಸ್ಸಾಂ ಸರ್ಕಾರ ಸೂಚಿಸಿತ್ತು. ಅಲ್ಲದೆ ಜಾಗರೂಕರಾಗಿರುವಂತೆಯೂ ಹೇಳಿತ್ತು. ಇದರ ಬೆನ್ನಲ್ಲೇ ಮಿಜೋರಾಂ ಮುಖ್ಯಮಂತ್ರಿಗಳು ಈ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.