ನವದೆಹಲಿ: ಕೋವಿಡ್ ರೂಪಾಂತರ ತಳಿ ಓಮೈಕ್ರಾನ್ ಮತ್ತು ಈಗ ಪತ್ತೆಯಾಗಿರುವ ಅದರ ಉಪತಳಿಯಾದ ‘ಎಕ್ಸ್ಬಿಬಿ’ ಭಾರತದಲ್ಲಿ ಪ್ರಬಲವಾದ ರೂಪಾಂತರಗಳೆನಿಸಿಕೊಂಡಿವೆ ಎಂದು ಭಾರತೀಯ ಸಾರ್ಸ್ ಕೋವ್ – 2 ಜಿನೋಮ್ ಒಕ್ಕೂಟ (ಐಎನ್ಎಸ್ಎಸಿಒಜಿ) ತನ್ನ ಬುಲೆಟಿನ್ನಲ್ಲಿ ತಿಳಿಸಿದೆ.

‘ಐಎನ್ಎಸ್ಎಸಿಒಜಿ’ಯ ಬುಲೆಟಿನ್ ಸೋಮವಾರ ಬಿಡುಗಡೆಯಾಗಿದೆ.

ಬುಲೆಟಿನ್ ಪ್ರಕಾರ, ಬಿಎ.2.75 ಮತ್ತು ಬಿಎ.2.10 ದೇಶದಲ್ಲಿ ಇನ್ನೂ ಪ್ರಚಲಿತದಲ್ಲಿವೆ. ಅದರೆ ಅದರ ತೀವ್ರತೆ ಕಡಿಮೆ ಎಂದು ಬುಲೆಟಿನ್ ಹೇಳಿದೆ.

‘ಈಶಾನ್ಯ ಭಾರತದಲ್ಲಿ, ಬಿಎ.2.75 ಪ್ರಚಲಿತದಲ್ಲಿದೆ. ಆದರೆ, ಸದ್ಯ ರೋಗದ ತೀವ್ರತೆ ಅಥವಾ ಆಸ್ಪತ್ರೆಗೆ ಸೇರುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿಲ್ಲ’ ಎಂದು ಅದು ಹೇಳಿದೆ.

ಓಮೈಕ್ರಾನ್ ಮತ್ತು ಅದರ ಉಪ-ತಳಿಗಳು ಭಾರತದಲ್ಲಿ ಪ್ರಬಲವಾದ ರೂಪಾಂತರವಾಗಿ ಮುಂದುವರೆದಿವೆ. ಎಕ್ಸ್ಬಿಬಿ ಅತ್ಯಂತ ವೇಗವಾಗಿ (ಶೇ 63.2) ಪ್ರಸರಣೆಯಾಗುವ ಉಪ-ವಂಶಾವಳಿಯಾಗಿ ಭಾರತದಲ್ಲಿ ಕಾಣಿಸಿಕೊಂಡಿದೆ ಎಂದು ಬುಲೆಟಿನ್ನಲ್ಲಿ ಉಲ್ಲೇಖಿಸಲಾಗಿದೆ.

‘ಉತ್ತರ ಭಾರತದಲ್ಲಿ ಎಕ್ಸ್ಬಿಬಿ ಪ್ರಚಲಿತದಲ್ಲಿದೆ. ಆದರೆ ಪೂರ್ವ ಭಾಗದಲ್ಲಿ ಬಿಎ.2.75ನ ಅಸ್ತಿತ್ವ ಹೆಚ್ಚಾಗಿದೆ. ಬಿಎ.2.10 ಮತ್ತು ಇತರ ಓಮೈಕ್ರಾನ್ ಉಪ-ವಂಶಾವಳಿಯ ಸಾಮರ್ಥ್ಯ ಕಳೆದ ವಾರ ಕಡಿಮೆ ಇತ್ತು. ಹೀಗಾಗಿ, ಈ ಅವಧಿಯಲ್ಲಿ ರೋಗದ ತೀವ್ರತೆ ಅಥವಾ ಆಸ್ಪತ್ರೆಗೆ ಸೇರುವವರ ಸಂಖ್ಯೆಯಲ್ಲಿ ಯಾವುದೇ ಹೆಚ್ಚಳ ಕಂಡುಬಂದಿಲ್ಲ’ ಎಂದು ಅದು ಹೇಳಿದೆ.

ಓಮೈಕ್ರಾನ್ ಮತ್ತು ಅದರ ಉಪ-ತಳಿಗಳು ಭಾರತದಲ್ಲಿ ಪ್ರಬಲವಾದ ರೂಪಾಂತರವಾಗಿ ಮುಂದುವರೆದಿವೆ ಎಂದು ನವೆಂಬರ್ 28ರ ಬುಲೆಟಿನ್ಲ್ಲಿ ಹೇಳಲಾಗಿತ್ತು.

ಕೆಲವು ದೇಶಗಳಲ್ಲಿ ಕೋವಿಡ್-19 ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಕಟ್ಟೆಚ್ಚರ ವಹಿಸಿದೆ.

ಇವುಗಳನ್ನೂ ಓದಿ

Explainer | BF.7 ಕೊರೊನಾ ಹೊಸ ತಳಿಯ ಭಯ: ಇದರ ಲಕ್ಷಣಗಳೇನು? ಮುಂಜಾಗ್ರತೆ ಹೇಗೆ?

ಚೀನಾದಲ್ಲಿ ಕೋವಿಡ್ ಹೆಚ್ಚಳಕ್ಕೆ ಕಾರಣವಾಗಿರುವ ಕೊರೊನಾ ತಳಿ ಭಾರತದಲ್ಲಿ ಪತ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.