ನವದೆಹಲಿ: ಪ್ರಧಾನಿ ಹುದ್ದೆ ಖಾಲಿ ಇಲ್ಲದಿರುವಾಗ ವಿರೋಧ ಪಕ್ಷಗಳು ಪ್ರಧಾನಿ ಅಭ್ಯರ್ಥಿಗಳ ಎರಡು ಡಜನ್ 'ವೇಯ್ಟಿಂಗ್ ಲಿಸ್ಟ್' ಸಿದ್ಧಪಡಿಸಿವೆ ಎಂದು ಬಿಜೆಪಿ ಮುಖಂಡ ಮುಕ್ತಾರ್ ಅಬ್ಬಾಸ್ ನಖ್ವಿ ಶನಿವಾರ ವ್ಯಂಗ್ಯ ಮಾಡಿದ್ದಾರೆ.

ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ನಖ್ವಿ, ಮೋದಿ ಫೋಬಿಯಾದ ರಾಜಕೀಯ ಕಾಯಿಲೆಯಿಂದ ಬಳಲುತ್ತಿರುವವರು ಶೀಘ್ರದಲ್ಲೇ ಇಲ್ಲದಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಸಲ್ಮಾನ್ ರಶ್ದಿ ಮೇಲೆ ದಾಳಿ ಮಾಡಿದವನು ಯಾರು? ಕುತೂಹಲಕರ ವಿಷಯಗಳು ಬಹಿರಂಗ..

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಾಮಾಣಿಕತೆ ಹಾಗೂ ಕಠಿಣ ಪರಿಶ್ರಮವನ್ನು ಸೋಲಿಸಲು ವಿಪಕ್ಷಗಳಿಗೆ ಸಾಧ್ಯವಿಲ್ಲ ಎಂದು ಹೇಳಿದರು.

ವಿರೋಧ ಪಕ್ಷಗಳ ರಾಜಕೀಯ ಅಸಹಿಷ್ಣುತೆ ಹಾಗೂ ಸುಳ್ಳು ಆರೋಪಗಳ ಹೊರತಾಗಿಯೂ ಪ್ರಧಾನಿ ಮೋದಿ ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ನಖ್ವಿ ಹೇಳಿದರು.

ಮೋದಿ ಅವರಿಗೆ ದೇಶದ ಭದ್ರತೆ ಹಾಗೂ ಘನತೆ 'ರಾಷ್ಟ್ರನೀತಿ' ಮತ್ತು ಪ್ರತಿಯೊಬ್ಬರ ಕಲ್ಯಾಣವೇ 'ರಾಷ್ಟ್ರಧರ್ಮ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.