ನವದೆಹಲಿ: ಮನೆಗಳನ್ನು ತೊರೆಯಬೇಕಾಗಿ ಬರುವ ಅಥವಾ ಸ್ಥಳಾಂತರಗೊಂಡ ಜನರ ಜೊತೆ ಗೌರವಯುತವಾಗಿ ನಡೆದುಕೊಳ್ಳಬೇಕು. ನಿರಾಶ್ರಿತರಿಗೆ ತನ್ನ ಗಡಿಗಳನ್ನು ತೆರೆಯುವಲ್ಲಿ ಭಾರತದ ಪ್ರಯತ್ನ ಶ್ಲಾಘನೀಯ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ ಕಚೇರಿಯ (ಯುಎನ್ಎಚ್ಸಿಆರ್) ಸಹಾಯಕ ಹೈಕಮಿಷನರ್ ಗಿಲಿಯನ್ ಟ್ರಿಗ್ಸ್ ಮಂಗಳವಾರ ಹೇಳಿದ್ದಾರೆ.

ನಾಲ್ಕು ದಿನಗಳ ಭೇಟಿಗಾಗಿ ಭಾರತಕ್ಕೆ ಬಂದಿರುವ ಅವರು ಇಲ್ಲಿನ ಗಾಂಧಿ ವಸ್ತುಸಂಗ್ರಹಾಲಯದಲ್ಲಿ ಏರ್ಪಡಿಸಿರುವ ಚರಕ ವಸ್ತು ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಟಿಬೆಟ್ ಮತ್ತು ಶ್ರೀಲಂಕಾದ ಜನರ ರಕ್ಷಣೆಗಾಗಿ ಭಾರತ ಮಾಡಿರುವ ಪ್ರಯತ್ನಗಳನ್ನು ಪ್ರಶಂಸಿಸಿದರು.

ನಿರಾಶ್ರಿತರಿಗೆ ನೆರವು ನೀಡಿರುವ ಸುದೀರ್ಘ ಇತಿಹಾಸ ಭಾರತಕ್ಕಿದೆ. ಇದುವೇ ನಾನು ಈ ದೇಶಕ್ಕೆ ಬರಲು ಬಯಸಿದ ಮೊದಲ ಕಾರಣ ಎಂದೂ ಹೇಳಿದರು.

ಮಹಾತ್ಮ ಗಾಂಧಿ ಅವರು ಸ್ವಾವಲಂಬನೆಗಾಗಿ ಚರಕವನ್ನು ಬಳಸಿರುವುದನ್ನು ಉಲ್ಲೇಖಿಸಿದ ಗಿಲಿಯನ್ ಟ್ರಿಗ್ಸ್, ನಿರಾಶ್ರಿತರನ್ನು ಸ್ವಾವಲಂಬಿಯಾಗಿಸುವ ಮೂಲಕ ಅವರಿಗೆ ಘನತೆ ತಂದುಕೊಡಬಹುದು ಎಂದಿದ್ದಾರೆ.

ಅಫ್ಗಾನಿಸ್ತಾನ ಮತ್ತು ಮ್ಯಾನ್ಮಾರ್ನಿಂದ ಬಂದ ಜನರಿಗೆ ಭಾರತ ನೀಡಿರುವ ನೆರವು ಕೂಡ ಮಹತ್ವದ್ದು ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.