ಮುಂಬೈ: ‘ಸ್ವಾತಂತ್ರ್ಯ ಹೋರಾಟಗಾರ, ಹಿಂದುತ್ವದ ಪ್ರತಿಪಾದಕ ವೀರ ಸಾವರ್ಕರ್ ಅವರ ಜೀವನಾಧಾರಿತ ಚಲನಚಿತ್ರವನ್ನು ಕಾಂಗ್ರೆಸ್ ವರಿಷ್ಠ, ವಯನಾಡು ಸಂಸದ ರಾಹುಲ್ ಗಾಂಧಿ ಅವರು ನೋಡಲಿ’ ಎಂದು ಬಿಜೆಪಿ ಮುಖಂಡ ಹಾಗೂ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದರು.

‘ರಾಹುಲ್ ಗಾಂಧಿ ಅವರು ಸಾವರ್ಕರ್ ಬಗ್ಗೆ ಓದಿಲ್ಲ. ಅರ್ಥಮಾಡಿಕೊಳ್ಳಲು ಪ್ರಯತ್ನಿಸಿಲ್ಲ ಎಂಬುದು ನನ್ನ ಭಾವನೆ. ಈಚೆಗಷ್ಟೇ ಬಿಡುಗಡೆಯಾದ ಚಲನಚಿತ್ರವನ್ನು ನೋಡುವಂತೆ ಅವರಲ್ಲಿ ಮನವಿ ಮಾಡಿಕೊಳ್ಳುವೆ. ನೋಡಲು ಇಷ್ಟಪಟ್ಟರೆ, ಅವರಿಗಾಗಿ ಇಡೀ ಚಿತ್ರಮಂದಿರವನ್ನೇ ನನ್ನ ಹಣದಲ್ಲಿ ಕಾಯ್ದಿರಿಸುವೆ. ಸಿನಿಮಾ ನೋಡಿದ ಬಳಿಕವಾದರೂ ಅರ್ಥಹೀನ ಹೇಳಿಕೆ ಕೊಡುವುದನ್ನು ಅವರು ನಿಲ್ಲಿಸಬಹುದು’ ಎಂದು ಫಡಣವೀಸ್ ವ್ಯಂಗ್ಯವಾಡಿದರು.

ಮರಾಠಿ ಭಾಷೆಯ ಸಿನಿಮಾ ಪ್ರೀಮಿಯರ್ ಶೋ ವೀಕ್ಷಿಸಿದ ಬಳಿಕ ಅವರು ಈ ರೀತಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.