ಶಬರಿಮಲೆ (ಕೇರಳ): ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ ಕಳೆದ 39 ದಿನಗಳಲ್ಲಿ ₹204.30 ಕೋಟಿ ಆದಾಯ ಸಂಗ್ರಹವಾಗಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಂಗಳವಾರ ಹೇಳಿದೆ.

ಭಕ್ತರು ನಾಣ್ಯದ ರೂಪದಲ್ಲಿ ಸಲ್ಲಿಸಿರುವ ಕಾಣಿಕೆಯನ್ನು ಎಣಿಕೆ ಮಾಡಿದರೆ ಆದಾಯದ ಮೊತ್ತವು ಇನ್ನಷ್ಟು ಹೆಚ್ಚಲಿದೆ ಎಂದು ಟಿಡಿಬಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಭಕ್ತರು ಸಲ್ಲಿಸಿರುವ ಕಾಣಿಕೆಯಿಂದ ₹63.89 ಕೋಟಿ ಸಂಗ್ರಹವಾಗಿದೆ. ‘ಅರವಣ’ ಪ್ರಸಾದ ಮಾರಾಟದಿಂದ ₹96.32 ಕೋಟಿ, ‘ಅಪ್ಪಂ’ ಪ್ರಸಾದ ಮಾರಾಟದಿಂದ ₹12.38 ಕೋಟಿ ಲಭಿಸಿದೆ ಎಂದಿದ್ದಾರೆ.

ಮಂಡಲ ಋತುವಿನಲ್ಲಿ ಡಿಸೆಂಬರ್ 25ರವರೆಗೆ 31,43,163 ಮಂದಿ ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದಾರೆ. ಇದೇ ಅವಧಿಯಲ್ಲಿ 7,25,049 ಮಂದಿ ಭಕ್ತರಿಗೆ ಉಚಿತವಾಗಿ ಆಹಾರ ಪೂರೈಸಲಾಗಿದೆ ಎಂದು ಪ್ರಶಾಂತ್ ತಿಳಿಸಿದ್ದಾರೆ.

ಮಂಡಲ ಪೂಜೆಯು ಇದೇ 27ರಂದು ನಡೆಯಲಿದೆ. ಮಂಡಲ ಪೂಜೆಯ ಬಳಿಕ ದೇವಾಲಯದ ಬಾಗಿಲು ಮುಚ್ಚಲಿದ್ದು, ಇದೇ 30ರಂದು ಮತ್ತೆ ತೆರೆಯಲಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.