ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ಚೌಖಂಬದಲ್ಲಿ ಚಾರಣದ ವೇಳೆ ಅಪಾಯಕ್ಕೆ ಸಿಲುಕಿರುವ ಇಬ್ಬರು ವಿದೇಶಿ ಪರ್ವತಾರೋಹಿಗಳ ರಕ್ಷಣೆಗಾಗಿ ಇಂದು (ಶನಿವಾರ) ಕಾರ್ಯಾಚರಣೆ ಮುಂದುವರಿಸಲಾಗಿದೆ.

ಎಸ್‌ಡಿಆರ್‌ಎಫ್ ಪರ್ವತಾರೋಹಿಗಳ ತಂಡವು ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ ಎಂದು ಚಮೋಲಿ ಜಿಲ್ಲಾಧಿಕಾರಿ ಸಂದೀಪ್ ಮಾಹಿತಿ ನೀಡಿದ್ದಾರೆ.
.ಅಮರಾವತಿ: ಪ್ರವಾದಿ ಬಗ್ಗೆ ಅವಹೇಳನ; ಗುಂಪಿನಿಂದ ಕಲ್ಲು ತೂರಾಟ,21 ಪೊಲೀಸರಿಗೆ ಗಾಯ.ಇಂಡಿಗೊ ವಿಮಾನ ಸಂಸ್ಥೆಯ ಆನ್ಲೈನ್ ಕಾರ್ಯಾಚರಣೆ ನಿಧಾನ: ಚೆಕ್–ಇನ್ ವಿಳಂಬ.
ಅಮೆರಿಕ ಹಾಗೂ ಬ್ರಿಟನ್‌ನ ಚಾರಣಿಗರ ರಕ್ಷಣೆಗೆ ಹೆಲಿಕಾಪ್ಟರ್ ಮೂಲಕ ಭಾರತೀಯ ವಾಯುಪಡೆಯು (ಐಎಎಫ್) ಶುಕ್ರವಾರ ಬೆಳಿಗ್ಗೆಯಿಂದಲೇ ಹುಡುಕಾಟ ನಡೆಸಿತ್ತು. ಆದರೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇಂದು ಮತ್ತೆ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಸಂದೀಪ್ ಹೇಳಿದ್ದಾರೆ.

ಚೌಖಂಬದಲ್ಲಿ ಸುಮಾರು 6,500 ಮೀಟರ್ ಎತ್ತರದಲ್ಲಿ ಲಾಜಿಸ್ಟಿಕಲ್ ಮತ್ತು ತಾಂತ್ರಿಕ ಉಪಕರಣಗಳು ಕೆಳಗೆ ಬಿದ್ದ ಕಾರಣ ಇಬ್ಬರು ಪರ್ವತಾರೋಹಿಗಳು ಅಪಾಯಕ್ಕೆ ಸಿಲುಕಿದ್ದಾರೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್ಇಒಸಿ) ತಿಳಿಸಿತ್ತು.
.ಆರ್ಬಿಐ ಉಪ ಗವರ್ನರ್ ರಾಜೇಶ್ವರ ರಾವ್ ಅವಧಿ ಒಂದು ವರ್ಷ ವಿಸ್ತರಿಸಿದ ಕೇಂದ್ರ.ಮಹಾರಾಷ್ಟ್ರ: ಚಾಕುವಿನಿಂದ ಇರಿದು ಎನ್ಸಿಪಿ ನಾಯಕನ ಹತ್ಯೆ.
ಈ ಕುರಿತು ಮಾಹಿತಿ ದೊರೆತ ಕೂಡಲೇ ಚಮೋಲಿ ಜಿಲ್ಲಾಧಿಕಾರಿ, ಚಾರಣಿಗರ ರಕ್ಷಣೆಗಾಗಿ ಭಾರತೀಯ ರಕ್ಷಣಾ ಸಚಿವಾಲಯದ ಮಿಲಿಟರಿ ವ್ಯವಹಾರಗಳ ಇಲಾಖೆಗೆ (ಡಿಎಂಎ) ಮನವಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.