ಬೆಂಗಳೂರು: ಬ್ರಿಟಿಷರ ಕಾಲದ ದೇಶದ್ರೋಹದ ಕಾನೂನನ್ನು, ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ತೆಗೆದುಹಾಕಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಹೇಳಿದ್ದಾರೆ. ಆದರೆ, ಭಾರತೀಯ ದಂಡ ಸಂಹಿತೆಯಲ್ಲಿ ಇದ್ದ 124ಎ ಸೆಕ್ಷನ್ ಅನ್ನು, ಭಾರತೀಯ ನ್ಯಾಯ ಸಂಹಿತೆಯಲ್ಲಿ 150ನೇ ಸೆಕ್ಷನ್ಗೆ ಸೇರಿಸಲಾಗಿದೆ. ‘ದೇಶದ್ರೋಹ’ ಎಂಬುದನ್ನು ‘ಭಾರತದ ಒಗ್ಗಟ್ಟು, ಸಾರ್ವಭೌಮತೆ ಮತ್ತು ಏಕತೆಗೆ ಧಕ್ಕೆ ತರುವಂತಹ ಕೃತ್ಯಗಳು’ ಎಂದು ಬದಲಿಸಲಾಗಿದೆ.

ಸರ್ಕಾರದ ಕ್ರಮಗಳು, ಚಟುವಟಿಕೆಗಳನ್ನು ಟೀಕಿಸುವುದನ್ನು ದೇಶದ್ರೋಹ ಎನ್ನಲಾಗದು ಎಂದು ಭಾರತೀಯ ದಂಡ ಸಂಹಿತೆಯಲ್ಲಿ ವಿವರಿಸಲಾಗಿತ್ತು. ಆದರೆ, ಭಾರತೀಯ ನ್ಯಾಯ ಸಂಹಿತೆಯಲ್ಲಿ ಸರ್ಕಾರದ ಕ್ರಮಗಳ ವಿರುದ್ಧದ ಟೀಕೆ ಮತ್ತು ಆಗ್ರಹಗಳನ್ನೂ ‘ಭಾರತದ ಒಗ್ಗಟ್ಟು, ಸಾರ್ವಭೌಮತೆ ಮತ್ತು ಏಕತೆಗೆ ಧಕ್ಕೆ ತರುವಂತಹ ಕೃತ್ಯಗಳು’ ಎಂದು ವಿವರಿಸಲಾಗಿದೆ. ಈ ಮೂಲಕ ಈ ಕಾನೂನನ್ನು ಮತ್ತಷ್ಟು ಕಠಿಣಗೊಳಿಸಲು ನೂತನ ನ್ಯಾಯ ಸಂಹಿತೆ ಮಸೂದೆಯು ಅವಕಾಶ ಮಾಡಿಕೊಟ್ಟಿದೆ.

ಭಾರತೀಯ ದಂಡ ಸಂಹಿತೆಯ 124ಎ ಸೆಕ್ಷನ್ ಅಡಿಯಲ್ಲಿ ವಿವರಿಸುವ ಕೃತ್ಯಗಳನ್ನು ‘ದೇಶದ್ರೋಹ’ದ ಕೃತ್ಯಗಳು ಎಂದು ಕರೆಯಲಾಗುತ್ತಿದೆ. ಈ ಸೆಕ್ಷನ್ನಲ್ಲಿ, ‘ಲಿಖಿತ ಅಥವಾ ಮೌಖಿಕವಾಗಿ ಅಥವಾ ಸಂಜ್ಞೆ ಅಥವಾ ಪ್ರದರ್ಶನದ ಮೂಲಕ, ಭಾರತ ಸರ್ಕಾರದ ವಿರುದ್ಧ ದ್ವೇಷ ಅಥವಾ ನಿಂದನೆ ಅಥವಾ ಅಸಮಾಧಾನ ಉಂಟುಮಾಡುವ ಹಾಗೂ ಅಂತಹ ಯತ್ನಗಳನ್ನು ಶಿಕ್ಷಾರ್ಹ ಅಪರಾಧ’ ಎಂದು ಪರಿಗಣಿಸಲಾಗುತ್ತದೆ. ಇಂತಹ ಕೃತ್ಯಗಳಿಗೆ ಜೀವಿತಾವಧಿ ಶಿಕ್ಷೆ ಮತ್ತು ದಂಡ ಅಥವಾ ಮೂರು ವರ್ಷಗಳವರೆಗೆ ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ.

ನೂತನ ಭಾರತೀಯ ನ್ಯಾಯ ಸಂಹಿತೆ ಮಸೂದೆಯಲ್ಲಿ 124ಎ ಸೆಕ್ಷನ್ ಅನ್ನು ಕೈಬಿಡಲಾಗಿದೆ. ಈ ಸೆಕ್ಷನ್ ಅಡಿಯಲ್ಲಿದ್ದ ವಿವರಗಳನ್ನು ಹೊಸದಾಗಿ ರೂಪಿಸಲಾಗಿರುವ 150ನೇ ಸೆಕ್ಷನ್ಗೆ ಸೇರಿಸಲಾಗಿದೆ.

124ಎ ಸೆಕ್ಷನ್ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳು ಎಂದು ಹೆಸರಿಸಿದ್ದ ಕೃತ್ಯಗಳ ಸಂಖ್ಯೆಯನ್ನು ಭಾರತೀಯ ದಂಡ ಸಂಹಿತೆಯ 150ನೇ ಸೆಕ್ಷನ್ನಲ್ಲಿ ಹೆಚ್ಚಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ 150ನೇ ಸೆಕ್ಷನ್ ಅಡಿಯಲ್ಲಿ, ಪ್ರತ್ಯೇಕತಾವಾದ ಅಥವಾ ಪ್ರತ್ಯೇಕತಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು ಅಥವಾ ಸಶಸ್ತ್ರ ಬಂಡಾಯ ಅಥವಾ ಸರ್ಕಾರಕ್ಕೆ ಧಕ್ಕೆ ತರುವಂತಹ ಚಟುವಟಿಕೆಗಳು ಅಥವಾ ಸಾರ್ವಭೌಮತೆಗೆ ಧಕ್ಕೆ ತರುವುದು ಅಥವಾ ಭಾರತದ ಏಕತೆಗೆ ಧಕ್ಕೆ ತರುವಂತಹ ಕೃತ್ಯಗಳು ಅಪರಾಧ ಕೃತ್ಯಗಳಾಗುತ್ತವೆ. ಅಂತಹ ಕೃತ್ಯಗಳು ಮೌಖಿಕ ಸ್ವರೂಪದ್ದು ಅಥವಾ ಬರಹದ ರೂಪದಲ್ಲಿ ಇರಬಹುದು ಅಥವಾ ಸಂಜ್ಞೆ ಅಥವಾ ಪ್ರದರ್ಶನ ಅಥವಾ ವಿದ್ಯುನ್ಮಾನ ಸಂವಹನ ಅಥವಾ ಆರ್ಥಿಕ ರೂಪದಲ್ಲಿ ಇರಬಹುದು ಎಂದು ಈ ಸೆಕ್ಷನ್ ಅಡಿಯಲ್ಲಿ ವಿವರಿಸಲಾಗಿದೆ. ಇಂತಹ ಕೃತ್ಯಗಳಿಗೆ ಜೀವಿತಾವಧಿ ಶಿಕ್ಷೆ ಅಥವಾ ಗರಿಷ್ಠ ಏಳು ವರ್ಷಗಳ ಸೆರೆವಾಸದ ಜತೆಗೆ ದಂಡ ವಿಧಿಸಲೂ ಈ ಸೆಕ್ಷನ್ ಅವಕಾಶ ಮಾಡಿಕೊಡುತ್ತದೆ.

ಭಾರತೀಯ ದಂಡ ಸಂಹಿತೆ: 124ಎ ಸೆಕ್ಷನ್

ಸರ್ಕಾರದ ಕ್ರಮಗಳು, ಸರ್ಕಾರದ ಆಡಳಿತಾತ್ಮಕ ನಡೆ ಅಥವಾ ಕ್ರಿಯೆಗಳು ಕಾನೂನುಬದ್ಧವಾಗಿಯೇ ಬದಲಾಗಬೇಕು ಎಂದು ಬಯಸಿ ಆ ಬಗ್ಗೆ ತೀವ್ರ ಅಸಮ್ಮತಿ ವ್ಯಕ್ತಪಡಿಸುವುದು, ಆ ಕಾರಣದಿಂದ ದ್ವೇಷ ಅಥವಾ ನಿಂದನೆ ಅಥವಾ ಅತೃಪ್ತಿಯನ್ನು ಉದ್ದೀಪಿಸದೇ ಇರುವಂತಹ ಕೃತ್ಯಗಳು ಅಥವಾ ಯತ್ನಗಳು ಈ ಸೆಕ್ಷನ್ ಅಡಿಯಲ್ಲಿ ಅಪರಾಧ ಕೃತ್ಯ ಎನಿಸಿಕೊಳ್ಳುವುದಿಲ್ಲ

ಭಾರತೀಯ ನ್ಯಾಯ ಸಂಹಿತೆ: 150ನೇ ಸೆಕ್ಷನ್

ಸರ್ಕಾರದ ಆಡಳಿತಾತ್ಮಕ ಅಥವಾ ಇತರ ಕ್ರಮಗಳಲ್ಲಿ ಕಾನೂನುಬದ್ಧ
ವಾಗಿ ಬದಲಾವಣೆ ಬಯಸಿ ನೀಡಲಾಗುವ ಅಭಿವ್ಯಕ್ತಿಗಳು ಮೇಲೆ ಹೇಳಲಾದ ಕೃತ್ಯಗಳನ್ನು ಎಸಗುವಂತೆ ಉದ್ದೀಪಿಸಿದರೆ ಅಥವಾ ಉದ್ದೀಪಿಸುವ ಯತ್ನಗಳು ಈ ಸೆಕ್ಷನ್ ಅಡಿ ಬರುತ್ತವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.