ಕೋಯಿಕ್ಕೋಡ್: ಉತ್ತರ ಕನ್ನಡದ ಶಿರೂರಿನಲ್ಲಿ ಉಂಟಾದ ಗುಡ್ಡ ಕುಸಿತದಿಂದಾಗಿ ಲಾರಿ ಸಮೇತ ಗಂಗಾವಳಿ ನದಿಯಲ್ಲಿ ಮುಳುಗಿ ಸಾವಿಗೀಡಾಗಿದ್ದ ಕೇರಳದ ಕಣ್ಣೂರಿನ ಚಾಲಕ ಅರ್ಜುನ್ ಅವರ ಸಹೋದರಿ ಅಂಜು, ಲಾರಿ ಮಾಲೀಕ ಮನಾಫ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ.
.ಶಿರೂರು ದುರಂತ | ಮಗನಿಗೆ ಆಟಿಕೆ ಲಾರಿ ಖರೀದಿಸಿದ್ದ ಅರ್ಜುನ್.
ಮನಾಫ್ ಅವರು ನಮ್ಮ ಕುಟುಂಬದ ಭಾವನಾತ್ಮಕ ಪರಿಸ್ಥಿತಿಯನ್ನು ಬಂಡವಾಳವನ್ನಾಗಿಸಿಕೊಂಡು, ಮೃತ ಸಹೋದರನ ಫೋಟೊ ಬಳಸಿ ಪ್ರಚಾರ ಪಡೆಯುತ್ತಿದ್ದಾರೆ. ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿ ಕುಟುಂಬದ ಹೆಸರಿಗೆ ಕಳಂಕ ತರುತ್ತಿದ್ದಾರೆ ಎಂದು ಅಂಜು ದೂರಿನಲ್ಲಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕುಟುಂಬದ ಬಗ್ಗೆ ಮಾನಹಾನಿ ಪ್ರಚಾರ ಮಾಡುತ್ತಿರುವವರ ವಿರುದ್ದವೂ ದೂರು ನೀಡಿದ್ದಾರೆ.

ಚೆರುವಾಯೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
.ಶಿರೂರು ಗುಡ್ಡ ಕುಸಿತ: ಕಾಣೆಯಾಗಿದ್ದ ಕೇರಳ ಲಾರಿ ಚಾಲಕ ಅರ್ಜುನ್ ಮೃತದೇಹ ಪತ್ತೆ.
ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದ ಬಳಿಕ, ತನ್ನ ಹಾಗೂ ತನ್ನ ಕುಟುಂಬದ ವಿರುದ್ಧ ಸೈಬರ್ ದಾಳಿ ನಡೆಸಲು ಸಮುದಾಯದ ದ್ವೇಷವನ್ನು ಪ್ರಚೋದಿಸುವ ರೀತಿಯಲ್ಲಿ ಮನಾಫ್ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿನಲ್ಲಿ ಅಂಜು ಆರೋಪಿಸಿದ್ದಾರೆ.

ಕುಟುಂಬದ ಪರಿಸ್ಥಿತಿಯನ್ನು ಮನಾಫ್ ವೈಯಕ್ತಿಕ ಲಾಭಕ್ಕಾಗಿ ಬಳಸುತ್ತಿದ್ದಾರೆ, ಹಣವನ್ನೂ ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು ತಮ್ಮ ಮನೆಯಲ್ಲಿ ಬುಧವಾರ ಮಾಧ್ಯಮಗೋಷ್ಠಿ ನಡೆಸಿದ್ದರು.
.ಸಿದ್ದರಾಮಯ್ಯಗೆ ಕೇರಳ ಸಿಎಂ ಪತ್ರ: ಲಾರಿ ಚಾಲಕ ಅರ್ಜುನ್ ಪತ್ತೆಗೆ ಒತ್ತಡ.
‘ಅವರು ನಮ್ಮನ್ನು ನಿರ್ಗತಿಕರು ಎಂದು ನಿರೂಪಿಸುತ್ತಿದ್ದಾರೆ. ಇದು ಕುಟುಂಬಸ್ಥರಿಗೆ ನೋವುಂಟುಮಾಡಿದೆ’ ಎಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದರು.

ಮನಾಫ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 192 (ಗಲಭೆಗೆ ಕುಮ್ಮಕ್ಕು) ಹಾಗೂ ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 120 (O) (ಸಾರ್ವಜನಿಕ ಶಾಂತಿ ಭಂಗ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
.ಶಿರೂರು ಗುಡ್ಡ ಕುಸಿತ: ಅರ್ಜುನ್ ಪತ್ತೆಗೆ ಕೇರಳ ‘ಒತ್ತಡ’.
ಕುಟುಂಬದ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮನಾಫ್, ‘ನಾನು ಯಾವುದೇ ವಿವಾದ ಸೃಷ್ಠಿ ಮಾಡಲು ಬಯಸುವುದಿಲ್ಲ. ನಾನು ಭಾವನಾತ್ಮಕವಾಗಿ ನಡೆದುಕೊಂಡಿದ್ದೇನೆ’ ಎಂದು ಹೇಳಿದ್ದಾರೆ. ಅಲ್ಲದೆ ವಿಷಯಗಳು ತಪ್ಪು ದಾರಿ ಹಿಡಿದುದ್ದಕ್ಕೆ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.

ಗಂಗಾವಳಿ ನದಿಗೆ ಬಿದ್ದಿದ್ದ ಲಾರಿ ಹಾಗೂ ಮೃತದೇಹ ಹೊರತೆಗೆಯವ ಕಾರ್ಯಾಚರಣೆ 70ಕ್ಕೂ ಅಧಿಕ ದಿನ ನಡೆದಿತ್ತು. ಈ ವೇಳೆ ಮನಾಫ್ ಸ್ಥಳದಲ್ಲಿಯೇ ಇದ್ದರು.
.ಶಿರೂರು ಭೂಕುಸಿತ: ಹೆದ್ದಾರಿ ಪ್ರಾಧಿಕಾರದ ವಿವರಣೆ ಕೇಳಿದ ಎನ್ಜಿಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.