ಇಂಫಾಲ: ಮಣಿಪುರದ ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ನಿಷೇಧಿತ ಕಾಂಗ್ಲೆಯಿ ಯವೊಲ್ ಕನ್ಬಾ ಲುಪ್ (ಕೆವೈಕೆಎಲ್) ಸಂಘಟನೆಯ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂಫಾಲ ಪಶ್ಚಿಮ ಜಿಲ್ಲೆಯ ಅವಾಂಗ್ ಪೊಟ್ಸಂಗ್ಬಾಮ್ ಪ್ರದೇಶದಲ್ಲಿ ಕೆವೈಕೆಎಲ್ ಸದಸ್ಯರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಂಧಿತರಿಂದ ಭದ್ರತಾ ಪಡೆ, ಮೂರು ಗನ್ ಟಾಪಿಂಗ್ ಲೆನ್ಸ್, ಮಿಲಿಟರಿ ಉಡುಪು, ಮದ್ದುಗುಂಡು ಮತ್ತು ವಾಹನವೊಂದನ್ನು ವಶಪಡಿಸಿದೆ ಎಂದು ಹೇಳಿದ್ದಾರೆ.

ಇದರ ಬೆನ್ನಲ್ಲೇ ಮತ್ತಷ್ಟು ಕಾರ್ಯಾಚರಣೆ ನಡೆಸಿರುವ ಪೊಲೀಸರು, ಒಂದು ಸಿಂಗಲ್ ಬ್ಯಾರೆಲ್ ಗನ್, ಒಂದು ಡಬಲ್ ಬ್ಯಾರೆಲ್ ಗನ್, 75 ಜೀವಂತ ಗುಂಡುಗಳು, ಎಕೆ-47ನ ಮೂರು ಲೋಡೆಡ್ ಮ್ಯಾಗಜೀನ್, 230 ಬೇರ್ಪಡಿಸಿದ ಗುಂಡುಗಳು, ಏರ್ ವೈರ್‌ಲೆಸ್ ವಾಕಿ-ಟಾಕಿ ಸೆಟ್ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
.ಮಣಿಪುರ ಹಿಂಸಾಚಾರ: 11,133 ಮನೆಗಳು ಬೆಂಕಿಗಾಹುತಿ, 59,564 ಜನರ ಸ್ಥಳಾಂತರ: ಸಿಎಂ.ರಾಷ್ಟ್ರೀಯ ಪೌರತ್ವ ನೋಂದಣಿಗೆ ಕುಕಿ ಸಮುದಾಯದ ಬೆಂಬಲ ಸ್ವಾಗತಿಸಿದ ಮಣಿಪುರ CM.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.