ನವದೆಹಲಿ: ಸಂಸತ್‌ನ ವಿಶೇಷ ಅಧಿವೇಶನವು ಇದೇ 18ರಂದು ಸಂಸತ್‌ನ ಹಳೆಯ ಕಟ್ಟಡದಲ್ಲಿ ಪ್ರಾರಂಭವಾಗಲಿದೆ. ಎರಡನೇ ದಿನದ ಅಧಿವೇಶನ ಸೆ.19ರಂದು ಗಣೇಶ ಚತುರ್ಥಿ ಸಂದರ್ಭ ಸಂಸತ್‌ನ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ.

ಮೂಲಗಳ ಪ್ರಕಾರ, ಈ ವಿಶೇಷ ಅಧಿವೇಶನದ ಮೊದಲ ದಿನ ಸಂಸತ್ತಿನ ಉಭಯ ಸದನಗಳ ಕಲಾಪ ಈ ಹಿಂದೆ ಇದ್ದ ರೀತಿಯಲ್ಲಿಯೇ ಸಂಸತ್ತಿನ ಹಳೆಯ ಕಟ್ಟಡದಲ್ಲಿ ಆರಂಭವಾಗಲಿದೆ. ಎರಡನೇ ದಿನದಿಂದ (ಸೆ.19) ಉಭಯ ಸದನಗಳ ಕಲಾಪಗಳು ಹೊಸ ಕಟ್ಟಡದಲ್ಲಿ ನಡೆಯಬಹುದು. ಹಿಂದೂ ನಂಬಿಕೆಯಂತೆ, ಗಣೇಶನಿಗೆ ಪೂಜೆ ಸಲ್ಲಿಸುವ ಮೂಲಕ ಹೊಸ ಕಟ್ಟಡದಲ್ಲಿ ಕಲಾಪ ಪ್ರಾರಂಭಿಸುವುದು ಮಂಗಳಕರ. ಹೊಸ ಕಟ್ಟಡದಲ್ಲಿ ಶುಭ ದಿನದಂದು ಅಧಿವೇಶನ ಪ್ರಾರಂಭಿಸಲು ಸರ್ಕಾರ ಗಣೇಶ ಚತುರ್ಥಿ ಆಯ್ದುಕೊಂಡಿದೆ ಎಂದು ಮೂಲಗಳು ಹೇಳಿವೆ.

ಕೇಂದ್ರ ಸರ್ಕಾರವು ಸೆ.18ರಿಂದ ಸೆ.22ರವರೆಗೆ ವಿಶೇಷ ಅಧಿವೇಶನ ಕರೆದಿದೆ. ಆದಾಗ್ಯೂ, ಸಂಸತ್ತಿನ ಹೊಸ ಕಟ್ಟಡದಲ್ಲಿ ಕಲಾಪಗಳು ನಡೆಯುವ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

ಸೋನಿಯಾ ಕಿಡಿ: ವಿರೋಧ ಪಕ್ಷಗಳಿಗೆ ಮಾಹಿತಿ ನೀಡದೆಯೇ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ದೂರಿದ್ದು, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

‘ಬೇರೆ ಯಾವುದೇ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡದೆಯೇ ವಿಶೇಷ ಅಧಿವೇಶನ ಕರೆಯಲಾಗಿದೆ. ಅಜೆಂಡಾ ಏನು ಎನ್ನುವುದರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಸರ್ಕಾರದ ವಿಷಯ ಸಂಬಂಧ 5 ದಿನಗಳನ್ನು ನಿಗದಿಪಡಿಸಲಾಗಿದೆ ಎಂದಷ್ಟೇ ನಮಗೆ ತಿಳಿಸಲಾಗಿದೆ’ ಎಂದು ಸೋನಿಯಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.