ನವದೆಹಲಿ: ದೇಶದಲ್ಲಿ ಸಾರ್ವಜನಿಕ ಸಾರಿಗೆ ಬಳಸುವವರ ಪ್ರಮಾಣಕೋವಿಡ್ನ ಕಾರಣದಿಂದ ಶೇ 90ರಷ್ಟು ಕುಸಿದಿದೆ ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಹೇಳಿದೆ.

ಖಾಸಗಿ ವಾಹನದಲ್ಲಿ ಓಡಾಡುವುದರಿಂದ ಕೋವಿಡ್ ಸೋಂಕು ಹರಡುವ ಸಾಧ್ಯತೆ ಕಡಿಮೆ ಇರುತ್ತದೆ. ಹೀಗಾಗಿ ಕೋವಿಡ್ ಹಾವಳಿ ಕಡಿಮೆಯಾದ ನಂತರವೂ ಜನರು ಖಾಸಗಿ ವಾಹನಗಳ ಬಳಕೆಗೆ ಆದ್ಯತೆ ನೀಡಲಿದ್ದಾರೆ.ಕೋವಿಡ್ ಬರುವುದಕ್ಕಿಂತಲೂ ಮುನ್ನ ಇದ್ದಷ್ಟೇ ಪ್ರಮಾಣದಲ್ಲಿ ಸಾರ್ವಜನಿಕ ಸಾರಿಗೆ ಬಳಕೆಯನ್ನು ಮರುಸ್ಥಾಪಿಸಲು ಅಗತ್ಯ ಕ್ರಮ ತೆಗೆದುಕೊಳ್ಳಿ ಎಂದು ಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಸಲಹೆ ನೀಡಿದೆ.

ದೇಶದ ಹಲವು ನಗರಗಳಲ್ಲಿ ಶೇ 16–57ರಷ್ಟು ಜನರು ಕಾಲ್ನಡಿಗೆ ಮೂಲಕ ಸಂಚರಿಸುತ್ತಿದ್ದಾರೆ. ಆಯಾ ನಗರಗಳ ವಿಸ್ತಾರದ ಮೇಲೆ ಈ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತದೆ. ಅಂತೆಯೇ ಶೇ 30–40ರಷ್ಟು ಜನರು ಸೈಕಲ್ ಬಳಸುತ್ತಿದ್ದಾರೆ ಎಂದು ಸಚಿವಾಲಯವು ಮಾಹಿತಿ ನೀಡಿದೆ.

ಕಾರ್ ಮತ್ತು ಇತರ ಖಾಸಗಿ ವಾಹನಗಳ ಬಳಕೆಯಲ್ಲಿನ ಭಾರಿ ಏರಿಕೆಯನ್ನು ನಿಯಂತ್ರಿಸುವುದಕ್ಕಾಗಿ ವಿಶ್ವದ ಹಲವು ನಗರಗಳಲ್ಲಿ ಇ–ಟಿಕೆಟಿಂಗ್, ಡಿಜಿಟಲ್ ಪಾವತಿ ಮತ್ತು ರಸ್ತೆಯಲ್ಲಿ ಸೈಕಲ್ಗಳಿಗೆ ಹೆಚ್ಚಿನ ಜಾಗ ಮೀಸಲಿರಿಸುವಂತಹ ಕ್ರಮಗಳನ್ನು ಜಾರಿಗೆ ತರಲಾಗಿದೆ. ಮೋಟಾರೇತರ ವಾಹನಗಳ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ಸೈಕಲ್ ಸವಾರಿಯನ್ನು ಸುಲಭವಾಗಿಸುವ ಉದ್ದೇಶದಿಂದ ವಿಶೇಷ ಲೇನ್ಗಳು, ಪಾರ್ಕಿಂಗ್ನಲ್ಲಿ ಜಾಗ ಮೀಸಲು ಇರಿಸುವಂತಹ ಕ್ರಮ ತೆಗೆದುಕೊಳ್ಳಲಾಗಿದೆ.ಬೇರೆ ದೇಶಗಳಂತೆ ನಮ್ಮಲ್ಲಿಯೂ ಮೋಟಾರೇತರ ವಾಹನಗಳ ಬಳಕೆಯನ್ನು ಉತ್ತೇಜಿಸಬೇಕಿದೆ ಎಂದು ಸಚಿವಾಲಯವು ಹೇಳಿದೆ.

ಇಂತಹ ಕ್ರಮಗಳನ್ನು ಉತ್ತೇಜಿಸುವ ಸಲುವಾಗಿ ಮೂರು ಹಂತದ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಬೇಕಿದೆ. ಕಡಿಮೆ (ಆರು ತಿಂಗಳು), ಮಧ್ಯಮ (1 ವರ್ಷದ ಒಳಗೆ) ಮತ್ತು ದೀರ್ಘಾವಧಿ (1–3 ವರ್ಷ) ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳಬೇಕು.

ಕೋವಿಡ್ ಲಾಕ್ಡೌನ್ ಅವಧಿಯಲ್ಲಿ ವಾಯುಮಾಲಿನ್ಯದ ಪ್ರಮಾಣದಲ್ಲಿ ಶೇ 60ರಷ್ಟು ಇಳಿಕೆ ಆಗಿದೆ. ಹೀಗಾಗಿಐದು ಕಿ.ಮೀ. ಅಂತರದ ಸಾರಿಗೆಗೆ ಅತ್ಯಂತ ಕಡಿಮೆ ಹೂಡಿಕೆಯ, ಮಾನವ ಸಂಪನ್ಮೂಲ ಕಡಿಮೆ ಬೇಡುವ, ಅತ್ಯಂತ ಕಡಿಮೆ ನಿರ್ವಹಣೆಯ ಮತ್ತು ಪರಿಸರಸ್ನೇಹಿ ಸಾರಿಗೆಯನ್ನು ಉತ್ತೇಜಿಸಬೇಕಿದೆ. ಇದರಿಂದ ವಾಯುಮಾಲಿನ್ಯವನ್ನೂ ನಿಯಂತ್ರಿಸಬಹುದು.ಖಾಸಗಿ ವಾಹನಗಳ ಬಳಕೆಗೆ ಪರ್ಯಾಯವಾಗಿ ಅಗ್ಗದ, ಸುರಕ್ಷಿತ, ವಾಯುಮಾಲಿನ್ಯ ಇಲ್ಲದ, ಸಮಗ್ರ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕಿದೆ. ಇದು ರಾಷ್ಟ್ರೀಯ ನಗರ ಸಾರಿಗೆಯ ಆದ್ಯತೆಯ ಕೆಲಸವಾಗಬೇಕು ಎಂದು ಸಚಿವಾಲಯ ಹೇಳಿದೆ.

ಅಂಕಿ ಅಂಶಗಳು

*700 ಕಿ.ಮೀ. ದೇಶದ 18 ನಗರಗಳಲ್ಲಿ ಇರುವ ಮೆಟ್ರೊಜಾಲದ ಉದ್ದ

*450 ಕಿ.ಮೀ. ದೇಶದ 11 ನಗರಗಳಲ್ಲಿ ಇರುವ ಬಸ್ ರ್ಯಾಪಿಡ್ ಟ್ರಾನ್ಸಿಟ್ ಜಾಲದ ಉದ್ದ

*1 ಕೋಟಿ ಜನರು ಪ್ರತಿದಿನ ಇವುಗಳನ್ನು ಬಳಸುತ್ತಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.