ಸೂರತ್: ಕಾಮಗಾರಿ ಪ್ರಗತಿಯಲ್ಲಿರುವ ಗುಜರಾತ್ನ ಸೂರತ್ ಮೆಟ್ರೊದ ಕಾಂಕ್ರೀಟ್ ಬ್ರಿಡ್ಜ್ನಲ್ಲಿ (ಗರ್ಡರ್) ಬಿರುಕು ಬಿಟ್ಟಿರುವುದು ಬೆಳಕಿಗೆ ಬಂದಿದೆ.

ಸೂರತ್ ನಗರದ ಪೂರ್ವ–ಪಶ್ಚಿಮ ಮಾರ್ಗದಲ್ಲಿ ನಿರ್ಮಾಣವಾಗುತ್ತಿರುವ ಪಿಲ್ಲರ್ 747 ರಿಂದ 748ರ ಮಧ್ಯದ ಗರ್ಡರ್ನಲ್ಲಿ ಬಿರುಕು ಮೂಡಿರುವುದು ಹಲವರನ್ನು ಅಚ್ಚರಿಗೆ ದೂಡಿದೆ.

ಗುಜರಾತ್ ಮೆಟ್ರೊ ರೈಲ್ ಕಾರ್ಪೊರೇಷನ್ ಲಿಮಿಟೆಡ್ (GMRC) ಈ ಕಾಮಗಾರಿಯನ್ನು ನಿರ್ವಹಿಸುತ್ತಿದೆ.

ಇನ್ನೂ ವಿಚಿತ್ರವೆಂದರೆ ಈ ವಿಭಾಗದ ಗರ್ಡರ್ ನಿರ್ಮಾಣ ಮುಗಿದಿದೆ ಎಂದು ಹೇಳಿರುವ ಬೆನ್ನಲ್ಲೇ ಈ ರೀತಿ ಘಟನೆ ನಡೆದಿರುವುದು ಪ್ರಯಾಣಿಕರಲ್ಲಿ ಆತಂಕ ತರಿಸಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ GMRC ಸಿವಿಲ್ ವಿಭಾಗದ ಜನರಲ್ ಮ್ಯಾನೇಜರ್ ಯೋಗೇಂದ್ರ ಸಿಂಗ್, ಬಿರುಕಿನ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ನಿರ್ಮಾಣದ ವೇಳೆ ಇದು ಸಹಜ. 24 ಗಂಟೆ ನಿಗಾದಲ್ಲಿರಿಸಿ ಶೀಘ್ರವೇ ಬಿರುಕು ಬಿಟ್ಟಿರುವ ಭಾಗವನ್ನು ಬದಲಾಯಿಸಲಾಗುವುದು ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಸೇರಿದಂತೆ ಅನೇಕ ಪಕ್ಷಗಳು ಈ ಘಟನೆಯ ಚಿತ್ರಗಳನ್ನು ಇಟ್ಟುಕೊಂಡು ಬಿಜೆಪಿ ವಿರುದ್ಧ ಹರಿಹಾಯ್ದಿವೆ.
.ಪ್ರೊಬೇಷನರಿ IAS ಅಧಿಕಾರಿ ಪೂಜಾ ಖೇಡ್ಕರ್ ಆಯ್ಕೆ ಅನೂರ್ಜಿತ: UPSCಯಿಂದ ಕ್ರಮ.ಯುಪಿಎಸ್ಸಿ ಕ್ರಮದ ಬೆನ್ನಲ್ಲೇ ಪೂಜಾ ಖೇಡ್ಕರ್ಗೆ ಬಂಧನದ ಭೀತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.