ಚೆನ್ನೈ: ನಟ, ರಾಜಕಾರಣಿ ವಿಜಯ್ ಅವರ ಪಕ್ಷದ ಧ್ವಜದ ವಿಚಾರವಾಗಿ ತಮಿಳುನಾಡು ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ) ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಹೊಸದಾಗಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ರಾಜಕೀಯ ಪಕ್ಷ ಘೋಷಿಸುವ ಮೂಲಕ ರಾಜ್ಯದಾದ್ಯಂತ ಸಂಚಲನ ಮೂಡಿಸಿರುವ ವಿಜಯ್, ಕಳೆದ ವಾರವಷ್ಟೇ ಧ್ವಜ ಅನಾವರಣ ಮಾಡಿದ್ದರು.

ಧ್ವಜದಲ್ಲಿ ಆನೆಗಳನ್ನು ಬಳಸಿರುವುದರ ವಿರುದ್ಧ ತಮಿಳುನಾಡು ಬಿಎಸ್‌ಪಿ ಅಧ್ಯಕ್ಷ ಆನಂದ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

'ಟಿವಿಕೆ ಪಕ್ಷವು ಎರಡು ಆನೆಗಳಿರುವ ಚಿಹ್ನೆಯನ್ನು ತನ್ನ ಧ್ವಜದಲ್ಲಿ ಬಳಸಿದೆ. ನಮ್ಮ ರಾಷ್ಟ್ರೀಯ ಪಕ್ಷ – ಬಹುಜನ ಸಮಾಜವಾದಿ, ಈಗಾಗಲೇ ಆನೆಯನ್ನು ಬಳಸುತ್ತಿದೆ. ಆನೆ ಗುರುತು ಕೇಂದ್ರೀಯ ರಾಷ್ಟ್ರೀಯ ಪಕ್ಷಕ್ಕೆ ಮೀಸಲಾಗಿದೆ' ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.
.ದಳಪತಿ ವಿಜಯ್ ಅಭಿನಯದ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಚಿತ್ರ ಸೆ.5 ರಂದು ತೆರೆಗೆ.TVK ಪಕ್ಷದ ಧ್ವಜ ಬಿಡುಗಡೆ ಮಾಡಿದ ವಿಜಯ್: ಚುನಾವಣೆಗೆ ಸಿದ್ಧತೆ ಆರಂಭಿಸಿದ ನಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.