ಗ್ವಾಲಿಯರ್: ‘ಒಲಿಂಪಿಕ್ಸ್ನಲ್ಲಿ ಭಾರತವು 2047ರ ಹೊತ್ತಿಗೆ ಅತಿ ಹೆಚ್ಚು ಪದಕ ಜಯಿಸಿದ ಅಗ್ರ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ’ ಎಂದು ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಯ ಭವಿಷ್ಯ ನುಡಿದಿದ್ದಾರೆ.

ಲಕ್ಷ್ಮಿಬಾಯಿ ರಾಷ್ಟ್ರೀಯ ದೈಹಿಕ ಶಿಕ್ಷಣ ಸಂಸ್ಥೆಯ 10ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಶುಕ್ರವಾರ ಅವರು ಮಾತನಾಡಿದರು.

‘2047ಕ್ಕೆ ಭಾರತವು ಸ್ವಾತಂತ್ರ್ಯಗೊಂಡು 100 ವರ್ಷಗಳನ್ನು ಪೂರೈಸಲಿದೆ. ಆ ಹೊತ್ತಿಗೆ ಭಾರತವು ವಿಶ್ವಶ್ರೇಷ್ಠ ಆಟಗಾರರನ್ನು, ತರಬೇತುದಾರರನ್ನು ಹಾಗೂ ತರಬೇತಿ ಕೇಂದ್ರಗಳನ್ನು ಸಜ್ಜುಗೊಳಿಸಬೇಕಿದೆ. ಇದನ್ನು ಸಾಧಿಸಲು ಈಗಾಗಲೇ ಗುರಿ ನಿಗದಿಪಡಿಸಲಾಗಿದೆ. ಭಾರತವು 2036ರ ಒಲಿಂಪಿಕ್ಸ್ ಆಯೋಜಿಸಲಿದ್ದು, ಈ ಹೊತ್ತಿಗೆ ಪದಕ ವಿಜೇತ ಪಟ್ಟಿಯಲ್ಲಿ ಅಗ್ರ 10 ರಾಷ್ಟ್ರಗಳಲ್ಲಿ ಭಾರತ ಒಂದಾಗಿರಬೇಕು. 2047ರ ಹೊತ್ತಿಗೆ ಅಗ್ರ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

‘ಲಕ್ಷ್ಮಿಬಾಯಿ ರಾಷ್ಟ್ರೀಯ ದೈಹಿಕ ಶಿಕ್ಷಣ ಸಂಸ್ಥೆಯಂತ ಶಿಕ್ಷಣ ಕೇಂದ್ರಗಳು ಗುಣಮಟ್ಟದ ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್ಡಿಗಳನ್ನು ನೀಡಿದಲ್ಲಿ, ವಿಶ್ವಶ್ರೇಷ್ಠ ಕ್ರೀಡಾಪಟುಗಳನ್ನು ಸಜ್ಜುಗೊಳಿಸಲು ಸಾಧ್ಯ. ಆ ಮೂಲಕ ದೇಶದಲ್ಲಿ ಹೊಸ ತಲೆಮಾರಿನ ಕ್ರೀಡಾಪಟುಗಳು ಸಿದ್ಧವಾಗಲಿದ್ದಾರೆ’ ಎಂದು ಹೇಳಿದ್ದಾರೆ.

‘ಕ್ರೀಡಾ ಕ್ಷೇತ್ರದಲ್ಲಿ ದೇಶದ ಕೀರ್ತಿ ಹೆಚ್ಚಿಸುವಂತೆ ಮಾಡಲು ‘ದೇಶ ಮೊದಲು’ ಎಂಬ ಭಾವನೆ ದೈಹಿಕ ಶಿಕ್ಷಕರಲ್ಲಿ ಇರಬೇಕು’ ಎಂದು ಮನ್ಸುಖ್ ಮಾಂಡವಿಯ ಹೇಳಿದರು.

ಘಟಿಕೋತ್ಸವದಲ್ಲಿ 121 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ 400 ಹಾಸಿಗೆಗಳ ಸಾಮರ್ಥ್ಯದ ವಿದ್ಯಾರ್ಥಿ ನಿಲಯ ಹಾಗೂ ಡಿಜಿಟಲ್ ಸ್ಟುಡಿಯೊವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.