ಪಟ್ನಾ: ಮೊದಲ ಹಂತದ ಚುನಾವಣೆ ಮುಗಿದಿರುವ ಬಿಹಾರದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ವಿರುದ್ಧ ಕೇಂದ್ರ ಸಚಿವ ಅಶ್ವಿನಿ ಚೌಬೆ ಶನಿವಾರ ಕಿಡಿಕಾರಿದ್ದಾರೆ. ಆರ್‌ಜೆಡಿ ನಾಯಕನಿಗೆ 'ಕ್ಯಾಬಿನೆಟ್' ಅನ್ನು ಸರಿಯಾಗಿ ಉಚ್ಚರಿಸಲು ಕೂಡ ಸಾಧ್ಯವಿಲ್ಲ ಎಂದಿದ್ದಾರೆ.

'ಸಮಸ್ಯೆಯನ್ನು ಅರ್ಥಮಾಡಿಕೊಳ್ಳದ ಮತ್ತು 10 ನೇ ತರಗತಿ ಪರೀಕ್ಷೆಯನ್ನು ಸಹ ಪಾಸ್ ಮಾಡಲು ಸಾಧ್ಯವಾಗದ ವ್ಯಕ್ತಿಒಬ್ಬಎಂಜಿನಿಯರ್ ಆಗಿರುವ ನಿತೀಶ್ ಕುಮಾರ್ ಅವರನ್ನು ಟೀಕಿಸುತ್ತಿದ್ದಾರೆ. ಅವರು ಕ್ಯಾಬಿನೆಟ್‌ನ ಸ್ಪೆಲ್ಲಿಂಗ್ ಕೂಡ ಬರೆಯಲು ಬರುವುದಿಲ್ಲ. ಅವರ ತಂದೆಯ ಮೊದಲ ಕ್ಯಾಬಿನೆಟ್ ನಿರ್ಧಾರವು ಒಂದು ಲಕ್ಷ ಉದ್ಯೋಗಗಳನ್ನು ಒದಗಿಸುವುದಾಗಿ ಭರವಸೆ ನೀಡಿತು. ಆದರೆ, ಅವರು ಹಣವನ್ನು ಸಂಗ್ರಹಿಸಿದರು ಮತ್ತು ಉದ್ಯೋಗದ ಅರ್ಜಿಗಳು ಇನ್ನೂ ಕಸದ ಬುಟ್ಟಿಯಲ್ಲಿವೆ,' ಎಂದು ಚೌಬೆ ದೂರಿದ್ದಾರೆ.

'ಕಾಂಗ್ರೆಸ್-ಆರ್‌ಜೆಡಿ ಮೈತ್ರಿಯ 'ಗಪ್ಪು ಮತ್ತು ಪಪ್ಪು'ಗಳು ಕೇವಲ 'ಲಪ್ಪು' ನೀಡುತ್ತಾರೆ ಅಂದರೆ ದೊಡ್ಡದಾದ ಸುಳ್ಳು ಭರವಸೆಗಳನ್ನು ನೀಡುತ್ತಾರೆ. ಹೀಗಾಗಿ ಜನರು ಜಾಗೃತರಾಗಿರಬೇಕು,' ಎಂದಿದ್ದಾರೆ.

ಬಿಹಾರ ನಿವಾಸಿಗಳಿಗೆ ಉಚಿತವಾಗಿ ಕೋವಿಡ್-19 ಲಸಿಕೆ ವಿತರಿಸುವುದಾಗಿ ಬಿಜೆಪಿ ನೀಡಿರುವ ಭರವಸೆಯು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಲ್ಲ ಎಂದು ತೀರ್ಪು ನೀಡಿರುವ ಭಾರತದ ಚುನಾವಣಾ ಆಯೋಗದ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಆಯುಷ್ಮಾನ್ ಭಾರತ್ ಅನ್ನು ನೀಡಿದ್ದೇವೆ ಮತ್ತು ಹೆಚ್ಚಿನದನ್ನು ಉತ್ತೇಜಿಸುವ ಅಗತ್ಯವಿದೆ. ಲಸಿಕೆ ಪ್ರಯೋಗವು 3ನೇ ಹಂತದಲ್ಲಿದೆ ಮತ್ತು ಎಲ್ಲವೂ ಸರಿಯಾಗಿ ನಡೆದರೆ ನಾವು ಅದನ್ನು ಉಚಿತವಾಗಿ ನೀಡುತ್ತೇವೆ. ನಾನು ಜನರಿಗೆ ಭರವಸೆ ನೀಡಲು ಬಯಸುತ್ತೇನೆ. ಉತ್ತಮ ಆಡಳಿತದ ಸರ್ಕಾರವು ಉತ್ತಮ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಲೂಟಿನಡೆಯುತ್ತದೆ ಎಂದು ಹೇಳಿದ್ದಾರೆ.

ನಿರುದ್ಯೋಗ ಮತ್ತು ವಲಸೆಯ ವಿಷಯಗಳ ಕುರಿತು ಮಾತನಾಡಲು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಶುಕ್ರವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಒತ್ತಾಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.