ನವದೆಹಲಿ: ಸೆಕ್ರೆಟರಿ ಆಫ್ ಸ್ಟೇಟ್ ಮೈಕಲ್ ಆರ್. ಪಾಂಪಿಯೋ ಅವರು ಅಕ್ಟೋಬರ್ 25–30 ರವರೆಗೂ ಭಾರತದ ನವದೆಹಲಿ, ಶ್ರೀಲಂಕಾದ ಕೊಲೊಂಬೊ, ಮಾಲ್ಡೀವ್ಸ್ನ ಮಾಲೆ, ಮತ್ತು ಇಂಡೋನೇಷ್ಯಾದ ಜಕಾರ್ತಕ್ಕೆ ಭೇಟಿ ನೀಡಲಿದ್ದಾರೆ.

ಸೆಕ್ರೆಟರಿ ಪಾಂಪಿಯೋ ಮತ್ತು ಸೆಕ್ರೆಟರಿ ಆಫ್ ಡಿಫೆನ್ಸ್ ಮಾರ್ಕ್ ಟಿ.ಎಸ್ಪರ್ ಅವರು ನವದೆಹಲಿಯಲ್ಲಿ ನಡೆಯಲಿರುವ ಮೂರನೇ ವಾರ್ಷಿಕ ಅಮೆರಿಕ–ಭಾರತ 2+2 ಸಚಿವರ ಮಟ್ಟದ ಮಾತುಕತೆಯಲ್ಲಿ ಭಾರತದ ಸಹಭಾಗಿಗಳೊಂದಿಗೆ ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಅಮೆರಿಕ–ಭಾರತದ ನಡುವಿನ ಸಮಗ್ರ ಜಾಗತಿಕ ವ್ಯೂಹಾತ್ಮಕ ಸಹಭಾಗಿತ್ವ ಮತ್ತು ವಿಶ್ವಾದ್ಯಂತ ಹಾಗೂ ಇಂಡೊ–ಪೆಸಿಫಿಕ್ ಪ್ರಾಂತ್ಯದಲ್ಲಿ ಸ್ಥಿರತೆ ಸಮೃದ್ಧಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ.

ಸೆಕ್ರೆಟರಿ ಪಾಂಪಿಯೋ ಅವರು ತಮ್ಮ ಕೊಲೊಂಬೊ ಭೇಟಿಯ ಸಂದರ್ಭದಲ್ಲಿ, ಅಮೆರಿಕ ಮತ್ತು ಶ್ರೀಲಂಕಾಗಳ ಸಹಭಾಗಿತ್ವದಲ್ಲಿ ಮುಕ್ತ ಇಂಡೊ–ಪೆಸಿಫಿಕ್ ಪ್ರಾಂತ್ಯವನ್ನು ಹೊಂದುವ ಸಮಾನ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲಿದ್ದಾರೆ.

ಅಲ್ಲಿಂದ ಮಾಲೆಗೆ ತೆರಳಲಿರುವ ಪಾಂಪಿಯೋ, ಉಭಯ ದೇಶಗಳ ನಡುವಣ ನಿಕಟ ದ್ವಿಪಕ್ಷೀಯ ಸಂಬಂಧದ ಪುನರ್ ದೃಢೀಕರಣ ಮತ್ತು ಪ್ರಾಂತೀಯ ಸಾಗರೋತ್ತರ ಸುಭದ್ರತೆಯಿಂದ ಹಿಡಿದು ಭಯೋತ್ಪಾದನೆಯ ವಿರುದ್ಧದ ಹೋರಾಟದವರೆಗೆ ಅನೇಕ ವಿಷಯಗಳಲ್ಲಿ ಉಭಯ ದೇಶಗಳ ಸಹಭಾಗಿತ್ವವನ್ನು ಮುಂದುವರಿಸುವ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ಬಳಿಕ ಜಕಾರ್ತಕ್ಕೆ ತೆರಳಲಿರುವ ಸೆಕ್ರೆಟರಿ, ಅಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ತಮ್ಮ ಸಹಭಾಗಿಗಳನ್ನು ಭೇಟಿ ಮಾಡಿ ಮುಕ್ತ ಇಂಡೊ–ಪೆಸಿಫಿಕ್ ಪ್ರಾಂತ್ಯದ ಪರಿಕಲ್ಪನೆಗೆ ಬದ್ಧತೆ ಪ್ರದರ್ಶಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.