ಲಖನೌ: ಉತ್ತರ ಪ್ರದೇಶದ ಮೊರಾದಾಬಾದ್ ಪಟ್ಟಣದ ಕಾಲೇಜುವೊಂದರಲ್ಲಿ ಬುರ್ಖಾ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಲು ಅವಕಾಶ ನಿರಾಕರಿಸಲಾಗಿದೆ.

ಬಳಿಕ ಕಾಲೇಜು ಆಡಳಿತ ಮಂಡಳಿಯ ಧೋರಣೆಯನ್ನು ವಿರೋಧಿಸಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಬುರ್ಖಾ ಧರಿಸುವ ಸಂಪೂರ್ಣ ಹಕ್ಕು ತಮಗಿದೆ ಎಂದು ಪಟ್ಟು ಹಿಡಿದಿರುವ ವಿದ್ಯಾರ್ಥಿನಿಯರು ಕಾಲೇಜು ಗೇಟ್ ಮುಂಭಾಗದಲ್ಲಿ ಧರಣಿ ನಡೆಸಿದರು.

ಇದನ್ನೂ ಓದಿ: ಜನಾಂಗೀಯ ನಿಂದನೆ ಮಾಡಿ ಹೊಡೆದರು: ಸಿಂಗಪುರ ಕೋರ್ಟಿನಲ್ಲಿ ಭಾರತ ಮೂಲದ ಮಹಿಳೆ ಅಳಲು

ಇದಕ್ಕೆ ಸ್ಪಷ್ಟನೆ ನೀಡಿದ ಕಾಲೇಜಿನ ಹಿರಿಯ ಅಧಿಕಾರಿ, ಕಳೆದ ಅಕ್ಟೋಬರ್ನಲ್ಲೇ ವಸ್ತ್ರ ಸಂಹಿತೆ ಜಾರಿಗೆ ತಂದಿದ್ದೇವೆ. ನಮ್ಮ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿದ್ದು, ಇದು ಅವರಿಗೆಲ್ಲರಿಗೂ ತಿಳಿದ ವಿಚಾರ. ಯಾವುದೇ ಕಾರಣಕ್ಕೂ ನಿಯಮ ಜಾರಿಗೊಳಿಸುತ್ತೇವೆ ಎಂದು ಹೇಳಿದ್ದಾರೆ.

ಕಾಲೇಜಿನ ಗೇಟ್ ಬಳಿಯಿರುವ ಕೊಠಡಿಯಲ್ಲಿ ವಿದ್ಯಾರ್ಥಿನಿಯರು ಉಡುಪು ಬದಲಾಯಿಸಬಹುದಾಗಿದೆ ಎಂದೂ ಹೇಳಿದ್ದಾರೆ.

ವಿದ್ಯಾರ್ಥಿನಿಯರ ಧರಣಿಗೆ ಸಮಾಜವಾದಿ ಪಕ್ಷದ (ಎಸ್ಪಿ) ಸ್ಥಳೀಯ ಮುಖಂಡರು ಬೆಂಬಲ ಸೂಚಿಸಿದ್ದಾರೆ. ಬುರ್ಖಾ ಧರಿಸಿದ ಹೆಣ್ಣುಮಕ್ಕಳ ತರಗತಿ ಪ್ರವೇಶವನ್ನು ನಿರಾಕರಿಸಿದರೆ ಪ್ರತಿಭಟಿಸುವುದಾಗಿ ಎಸ್ಪಿ ಮಾಜಿ ಶಾಸಕ ಜಮೀರುಲ್ಲಾ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.