ನವದೆಹಲಿ: ದೀಪಾವಳಿ ದಿನದಂದು ಕುಂಬಾರರು ಹಾಗೂ ಪೇಂಟಿಂಗ್ ಕೆಲಸಗಾರರೊಂದಿಗೆ ಮಾತುಕತೆ ನಡೆಸಿದ ವಿಡಿಯೊವನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ ಹಂಚಿಕೊಂಡಿದ್ದಾರೆ. ಅದರಲ್ಲಿ, ಜನರು ಕೌಶಲಗಳಿಂದ ಸೂಕ್ತ ಮನ್ನಣೆ ಪಡೆಯುವ ಹಾಗೂ ಪ್ರತಿಯೊಬ್ಬರ ಕೊಡುಗೆಯನ್ನು ಗೌರವಿಸುವಂತಹ ವ್ಯವಸ್ಥೆಯನ್ನು ನಿರ್ಮಿಸಬೇಕಿದೆ ಎಂದು ಕರೆ ನೀಡಿದ್ದಾರೆ.

9 ನಿಮಿಷಗಳ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿರುವ ರಾಹುಲ್, 'ಯಾರ ಶ್ರಮ ಭಾರತವನ್ನು ಬೆಳಗುತ್ತಿದೆಯೋ ಅವರೊಂದಿಗೆ ದೀಪಾವಳಿ!' ಎಂದು ಬರೆದುಕೊಂಡಿದ್ದಾರೆ.

ವಿಡಿಯೊದಲ್ಲಿ ತಮ್ಮ ಸೋದರಳಿಯ ರೈಹಾನ್ ರಾಜೀವ್ ವಾದ್ರಾ (ಪ್ರಿಯಾಂಕಾ ಗಾಂಧಿ ವಾದ್ರಾ ಪುತ್ರ) ಅವರೊಂದಿಗೆ ರಾಹುಲ್ ಸಂವಹನ ನಡೆಸಿದ್ದಾರೆ.

'ವಿಶೇಷ ವ್ಯಕ್ತಿಗಳೊಂದಿಗೆ ಮರೆಯಲಾಗದ ದೀಪಾವಳಿ – ಪೇಂಟಿಂಗ್ ಮಾಡುವ ಕೆಲವು ಸಹೋದರರು ಮತ್ತು ಮಣ್ಣಿನ ದೀಪಗಳನ್ನು ಮಾಡುವ ಕುಂಬಾರರ ಕುಟುಂಬದೊಂದಿಗೆ ಕೆಲಸ ಮಾಡುವ ಮೂಲಕ ಈ ದೀಪಾವಳಿಯನ್ನು ಆಚರಿಸಿದೆ' ಎಂದು ಹೇಳಿಕೊಂಡಿರುವ ಅವರು, 'ನಾನು ಅವರ ಕೆಲಸವನ್ನು ಹತ್ತಿರದಿಂದ ನೋಡಿದೆ. ಕೌಶಲವನ್ನು ಕಲಿಯಲು ಹಾಗೂ ಅವರ ಸಮಸ್ಯೆಗಳು, ಕಷ್ಟಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ. ಅವರು ಮನೆಗಳಿಗೆ ಹೋಗುವುದಿಲ್ಲ. ನಾವು ಸಂಭ್ರಮದಿಂದ ಹಬ್ಬಗಳನ್ನು ಆಚರಿಸುತ್ತೇವೆ. ಅವರು, ಸ್ವಲ್ಪ ಹಣ ಗಳಿಸುವುದಕ್ಕಾಗಿ ತಮ್ಮ ಊರು, ನಗರ, ಕುಟುಂಬವನ್ನೇ ಮರೆತಿದ್ದಾರೆ' ಎಂದಿದ್ದಾರೆ.

'ಮಣ್ಣಿನಿಂದ ಸಂತಸ ಮೂಡಿಸುತ್ತಾರೆ. ಇತರರ ಹಬ್ಬಗಳಿಗೆ ಬೆಳಕಾಗುವ ಅವರು, ಸ್ವತಃ ಬೆಳಕಿನಲ್ಲಿ ಬದುಕಬಲ್ಲರೇ?' ಎಂದು ಕೇಳಿದ್ದಾರೆ. ಹಾಗೆಯೇ, 'ಮನೆಗಳನ್ನು ಕಟ್ಟುವವರು ಸ್ವಂತ ಮನೆಗಳನ್ನು ಕಷ್ಟಪಟ್ಟು ನಡೆಸುತ್ತಾರೆ' ಎಂದಿದ್ದಾರೆ.

ದೀಪಾವಳಿ ಎಂದರೆ ಬೆಳಕು. ಅದು ಬಡತನ ಮತ್ತು ಅಸಹಾಯಕತೆಯ ಕತ್ತಲ್ಲು ಕಳೆಯಲಿ ಎಂದು ಆಶಿಸಿದ್ದಾರೆ.

'ಜನರು ತಮ್ಮ ಕೌಶಲಗಳಿಗೆ ತಕ್ಕ ಬೆಲೆ ಹಾಗೂ ಕೊಡುಗೆಗಳಿಗೆ ಸೂಕ್ತ ಗೌರವ ಪಡೆಯುವಂತಹ ಮತ್ತು ಎಲ್ಲರ ಪಾಲಿಗೂ ದೀಪಾವಳಿಯನ್ನು ಸಂತಸದಾಯಕವಾಗಿಸುವ ವ್ಯವಸ್ಥೆಯನ್ನು ರೂಪಿಸಬೇಕಿದೆ. ಈ ದೀಪಾವಳಿಯು ನಿಮ್ಮೆಲ್ಲರ ಜೀವನದಲ್ಲಿ ಅಭ್ಯುದಯ, ಪ್ರಗತಿ ಮತ್ತು ಪ್ರೀತಿಯನ್ನು ತರಲಿದೆ ಎಂದು ಭಾವಿಸುತ್ತೇನೆ' ಎಂದಿದ್ದಾರೆ.

ಕೆಲಸಗಾರರು ಮತ್ತು ರೈಹಾನ್ ಜೊತೆಗೂಡಿ ರಾಹುಲ್ ಅವರು ಜನಪತ್ ನಿವಾಸದ ಗೋಡೆಗಳಿಗೆ ಬಣ್ಣ ಬಳಿಯುವುದು ಹಾಗೂ ಇತರ ಕೆಲಸಗಳನ್ನು ಮಾಡುವುದು ವಿಡಿಯೊದಲ್ಲಿದೆ. ಹಾಗೆಯೇ, ಮಣ್ಣಿನ ದೀಪಗಳನ್ನು ತಯಾರಿಸುವ ಮಹಿಳೆಯೊಬ್ಬರ ಮನೆಗೆ ತೆರಳಿ, ದೀಪಗಳನ್ನು ಮಾಡುವುದು ಹಾಗೂ ಅವುಗಳನ್ನು ತಮ್ಮ ತಾಯಿ, ಸಹೋದರಿಗೆ ನೀಡುತ್ತೇನೆ ಎಂದಿರುವುದೂ ದಾಖಲಾಗಿದೆ.

ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ 'ಭಾರತ್ ಜೋಡೊ ಯಾತ್ರೆ' ಹಾಗೂ ಮಣಿಪುರದಿಂದ ಮುಂಬೈ ವರೆಗೆ 'ಭಾರತ್ ನ್ಯಾಯ ಯಾತ್ರೆ' ನಡೆಸಿದ್ದ ರಾಹುಲ್, ಮೆಕ್ಯಾನಿಕ್ಗಳು, ಚಮ್ಮಾರರು, ಕಾರ್ಮಿಕರು, ವಾಹನ ಚಾಲಕರು ಸೇರಿದಂತೆ ವಿವಿಧ ವರ್ಗಗಳ ಜನರೊಂದಿಗೆ ಆಗಾಗ್ಗೆ ಸಂವಹನ ನಡೆಸುತ್ತಿರುತ್ತಾರೆ. ಅವುಗಳ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುವ ಮೂಲಕ, ಸಮಸ್ಯೆಗಳತ್ತ ಗಮನ ಸೆಳೆಯುವುದರಲ್ಲಿ ನಿರತರಾಗಿದ್ದಾರೆ.
.ದೀಪಾವಳಿ ಸಂಭ್ರಮ: ದೇಶದಾದ್ಯಂತ ಹಲವೆಡೆ ಅಗ್ನಿ ಅವಘಡ.ದೀಪಾವಳಿ ಸಂಭ್ರಮ: ಎಲ್ಲೆಡೆ ಹಬ್ಬದ ಖರೀದಿ ಭರಾಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.