ನವದೆಹಲಿ: ಗಾಲಿ ಕುರ್ಚಿಯಲ್ಲಿ ಕುಳಿತು ಬಂದಿದ್ದ ಮಹಿಳೆಯೊಬ್ಬರು ತಮ್ಮ ಒಳ ಉಡುಪಿನಲ್ಲಿ ₹ 25 ಲಕ್ಷ ಮೌಲ್ಯದ ಯುಎಸ್ ಡಾಲರ್ನ್ನು ಸಾಗಿಸುವ ವೇಳೆ ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ.

ದುಬೈನಿಂದ ಬಂದಿದ್ದ ಬಂಧಿತ ಮಹಿಳೆಯನ್ನು ವಿಮಾನ ನಿಲ್ದಾಣದ ಸಿಐಎಸ್ಎಫ್ ಸಿಬ್ಬಂದಿ ಬಂಧಿಸಿದ್ದಾರೆ. ವಿಮಾನ ನಿಲ್ದಾಣದ ಮೂರನೇ ಟರ್ಮಿನಲ್ನಲ್ಲಿ ತಪಾಸಣೆಗೆ ಒಳಪಡಿಸುವಾಗ ಘಟನೆ ಬೆಳಕಿಗೆ ಬಂದಿದೆ.

ಗಾಲಿ ಕುರ್ಚಿಯಲ್ಲಿ ಬಂದಿದ್ದ ಮಹಿಳೆ ಒಳ ಉಡುಪಿನಲ್ಲಿ 32,300 ಯುಎಸ್ ಡಾಲರ್ನ್ನು ದುಬೈನಿಂದ ತೆಗೆದುಕೊಂಡು ಬಂದಿದ್ದರು. ಆದರೆ, ಸೂಕ್ತ ದಾಖಲಾತಿಗಳನ್ನು ಪೂರೈಸದಿದ್ದಕ್ಕೆ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.

ಬಂಧಿತ ಮಹಿಳೆಯ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಹೆಚ್ಚಿನ ಮಾಹಿತಿ ನೀಡಿಲ್ಲ.

ದೆಹಲಿ 'ಸೋನು ಸೂದ್' ಎನಿಸಿಕೊಂಡಿದ್ದ ರೈತ ಪಪ್ಪನ್ ಸಿಂಗ್ ಆತ್ಮಹತ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.