ಇಂದೋರ್: ಆನ್ಲೈನ್ ವಿಡಿಯೊ ಗೇಮ್ ’ಬ್ಲೂ ವೇಲ್’ ಜಾಲದಲ್ಲಿ ಸಿಲುಕಿರುವ ಮಕ್ಕಳ ಆತ್ಮಹತ್ಯೆ ಪ್ರಕರಣ ಮುಂದುವರಿದಿದೆ. ಶಾಲಾ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ವಿದ್ಯಾರ್ಥಿಯನ್ನು ಆತನ ಸ್ನೇಹಿತ ರಕ್ಷಿಸಿದ್ದಾನೆ.

ಮಧ್ಯ ಪ್ರದೇಶದ ಇಂದೋರ್ನಲ್ಲಿ 50 ದಿನಗಳ 50 ಸವಾಲುಗಳನ್ನು ಬೆನ್ನಟ್ಟಿ ಹೊರಟ ಏಳನೇ ತರಗತಿ ವಿದ್ಯಾರ್ಥಿ, ಜಯಕ್ಕೆ ಬೇಕಾದ ಅಂತಿಮ ಟಾಸ್ಕ್ ’ಆತ್ಮಹತ್ಯೆ’ಗೆ ಗುರುವಾರ ಮುಂದಾಗಿದ್ದ.

ನಗರದ ಚಮೇಲಿ ದೇವಿ ಪಬ್ಲಿಕ್ ಶಾಲೆಯಲ್ಲಿ ಬೆಳಗಿನ ಪ್ರಾರ್ಥನೆ ಬಳಿಕ ವಿದ್ಯಾರ್ಥಿ ಶಾಲೆಯ ಮೂರನೇ ಮಹಡಿಯತ್ತ ಓಡಿದ್ದಾನೆ. ಅಸಹಜವಾಗಿ ತೋರುತ್ತಿದ್ದ ವರ್ತನೆಯನ್ನು ಗಮನಿಸಿದ್ದ ಆತನ ಸ್ನೇಹಿತ ಮಹಡಿಯಿಂದ ಬೀಳುವ ಮುನ್ನ ಹಿಡಿದು ರಕ್ಷಣೆಗಾಗಿ ಚೀರಿದ್ದಾನೆ. ಸಹಾಯಕ್ಕೆ ಧಾವಿಸಿದ ಶಿಕ್ಷಕರೊಬ್ಬರು ಬಾಲಕನನ್ನು ರಕ್ಷಿಸಿದ್ದಾರೆ.

ತಾನು ಗೇಮ್ನ 50 ಸವಾಲನ್ನು ಸ್ವೀಕರಿಸಿದ್ದು, ಅಂತಿಮವಾಗಿ ಕಟ್ಟಡದಿಂದ ಬೀಳುವಂತೆ ಗೇಮ್ ನಿಯಂತ್ರಕ ಸೂಚಿಸಿದ್ದಾರೆ ಎಂದು ಬಾಲಕ ಶಾಲಾ ಶಿಕ್ಷಕರಿಗೆ ತಿಳಿಸಿದ್ದಾನೆ. ತಂದೆಯ ಮೊಬೈಲ್ನಲ್ಲಿ 50 ದಿನಗಳಿಂದ ‘ಬ್ಲೂ ವೇಲ್ ಸುಸೈಡ್ ಚಾಲೆಂಜ್’ ಗೇಮ್ ಆಡುತ್ತಿದ್ದಾಗಿ ಹೇಳಿದ್ದಾನೆ.

ಇತ್ತೀಚೆಗಷ್ಟೇ ಇದೇ ಗೇಮ್ನ ಆತ್ಮಹತ್ಯೆ ಸವಾಲು ಸ್ವೀಕರಿಸಿ ಮುಂಬೈನ ಅಂಧೇರಿಯಲ್ಲಿ ಮನ್ಪ್ರೀತ್ ಸಿಂಗ್ (14) ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದ.

ಹದಿಹರೆಯದವರ ಪ್ರಾಣಕ್ಕೆ ಎರವಾಗುತ್ತಿರುವ ‘ಬ್ಲೂ ವೇಲ್’ ಗೇಮ್ಗೆ ಜಾಗತಿಕ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿದ್ದರೂ ಆತ್ಮಹತ್ಯೆ ಪ್ರಚೋದಕ ಜಾಲದಲ್ಲಿ ಮುಗ್ದರು ಸಿಲುಕುವುದು ಮುಂದುವರಿದಿದೆ.

ಇನ್ನಷ್ಟು ಓದು:

* ಹದಿಹರೆಯದವರ ಪ್ರಾಣಕ್ಕೆ ಮಾರಕವಾಗುತ್ತಿರುವ ‘ಬ್ಲೂ ವೇಲ್ ಸುಸೈಡ್ ಚಾಲೆಂಜ್’ ಗೇಮ್

* ಸಾವಿನತ್ತ ನೂಕುವ ‘ಬ್ಲೂವೇಲ್’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.