ತೋರಣಗಲ್, ಬಳ್ಳಾರಿ: ‘ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ನೀಡಿರುವ ವರದಿಯಲ್ಲಿ ಗೊಂದಲವಿದೆ. ಚುನಾವಣೆ ಸೋಲಿನ ಭೀತಿಯಿಂದ ಕಾಂಗ್ರೆಸ್ ಹೀಗೆ ಮಾಡಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದರು.

‘ಮಧ್ಯಂತರ ವರದಿಯು 14 ಪುಟಗಳಿದ್ದು, ಒಂದೊಂದು ಪುಟಕ್ಕೆ ಒದೊಂದು ಕೋಟಿಯಂತೆ ₹14 ಕೋಟಿ ಹಗರಣ ಎಂದು ಬರೆದಿದ್ದಾರೆ. ಇಷ್ಟೊಂದು ಆತುರ ಏಕೆ? ಉಪ ಚುನಾವಣೆಯಲ್ಲಿ ಮಧ್ಯಂತರ ವರದಿ ತರುವ ಅಗತ್ಯ ಏನಿದೆ? ತಮ್ಮ ಸರ್ಕಾರದ ಹಗರಣ ಮುಚ್ಚಿ ಹಾಕಲು ಯಡಿಯೂರಪ್ಪ, ಶ್ರೀರಾಮುಲುರನ್ನು ಬೆದರಿಸುವ ಕೆಲಸ ನಡೆಯುತ್ತಿದೆ’ ಎಂದರು.

ಮೋಜು ಮಸ್ತಿಯಲ್ಲಿ ತೊಡಗಿದ್ದ ಕಾಂಗ್ರೆಸ್

ಸಂಡೂರು (ಬಳ್ಳಾರಿ): ‘ಕೋವಿಡ್ ಸಂದರ್ಭದಲ್ಲಿ ನಾವು ಜನರ ಜೀವ ಉಳಿಸುತ್ತಿದ್ದರೆ, ಕಾಂಗ್ರೆಸ್ಸಿನವರು ಮೋಜು ಮಸ್ತಿಯಲ್ಲಿ ತೊಡಗಿದ್ದರು’ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು.

ಭಾನುವಾರ ಸಂಡೂರಿನ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ‘ಕೋವಿಡ್ ಸಂದರ್ಭದಲ್ಲಿ ನಾನು ರಾಜ್ಯದ ಎಲ್ಲಾ ಕಡೆ ಹೋಗಿದ್ದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿ.ಎಸ್ ಯಡಿಯೂರಪ್ಪ ಜನರ ಜೀವ ಉಳಿಸುವ ಕೆಲಸ ಮಾಡಿದರು. ನಾವು ರಾತ್ರಿ ಹಗಲು ಕೆಲಸ ಮಾಡಿದ್ದೇವೆ. ನಮ್ಮ ಮೇಲೆ ಆರೋಪ ಮಾಡಿದ್ದಾರೆ. ತನಿಖೆಯನ್ನೂ ಮಾಡಲಿ. ನಾವು ಬಡವರ ಹಣ ಹೊಡೆದಿಲ್ಲ’ ಎಂದರು.

‘ಬಿಜೆಪಿಯವರು ಕೋವಿಡ್ ಸಂದರ್ಭದಲ್ಲಿ ಹೆಣದ ಮೇಲೆ ಹಣ ಮಾಡಿದ್ದಾರೆ. ಹೀಗಾಗಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ,ಆರೋಗ್ಯ ಸಚಿವ ಶ್ರೀರಾಮುಲು ಮೇಲೆ ಕಾನೂನು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಇಲ್ಲಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.