ಬೆಂಗಳೂರು: ಗ್ರಾಮ ಪಂಚಾಯಿತಿಗಳು ಸೇರಿದಂತೆ ಗ್ರಾಮೀಣ ಸ್ಥಳೀಯಾಡಳಿತ ಸಂಸ್ಥೆಗಳು ಬಾಕಿ ಉಳಿಸಿಕೊಂಡಿರುವ ₹5,257.70 ಕೋಟಿ ವಿದ್ಯುತ್ ಬಿಲ್ ಅನ್ನು ವಿದ್ಯುತ್ ಸರಬರಾಜು ಕಂಪನಿಗಳಿಗೆ ಪಾವತಿಸಲು ವಸತಿ ಮತ್ತು ನಗರಾಭಿವೃದ್ಧಿ ನಿಗಮದಿಂದ (ಹುಡ್ಕೊ) ರಾಜ್ಯ ಸರ್ಕಾರ ಸಾಲ
ಪಡೆದಿದೆ.

ಕುಡಿಯುವ ನೀರು ಸರಬರಾಜು ಮತ್ತು ಬೀದಿದೀಪಗಳ ಸ್ಥಾಪನೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಗಳು ಮತ್ತು ಗ್ರಾಮೀಣ ಸ್ಥಳೀಯಾಡಳಿತ ಸಂಸ್ಥೆಗಳು 2015ರ ಏಪ್ರಿಲ್ 1ರಿಂದ 2023ರ ಮಾರ್ಚ್ 31ರವರೆಗೆ ಒಟ್ಟು ₹5,257.70 ಕೋಟಿಯನ್ನು ಕೆಪಿಸಿಎಲ್, ಕೆಪಿಟಿಸಿ ಮತ್ತು ಎಸ್ಕಾಂಗಳಿಗೆ (ವಿದ್ಯುತ್ ಪೂರೈಕೆ ಕಂಪನಿಗಳು) ಪಾವತಿಸಲು ಬಾಕಿ ಉಳಿಸಿಕೊಂಡಿವೆ.

ಈ ಮೊತ್ತ ಪಾವತಿಗೆ ರಾಜ್ಯ ಸರ್ಕಾರವು ಹುಡ್ಕೊದಿಂದ ಸಾಲ ಪಡೆದಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ಆರ್ಥಿಕ ಇಲಾಖೆಯು ಮಾರ್ಚ್ 25ರಂದು ನೀಡಿದ್ದ ಟಿಪ್ಪಣಿ ಅನ್ವಯ, ಭದ್ರತೆಗೆ ಸರ್ಕಾರದ ಖಾತ್ರಿ ನೀಡಿ, ವಿದ್ಯುತ್ ಪೂರೈಕೆ ಕಂಪನಿಗಳಿಗೆ ಪಾವತಿಸಲು ಬಾಕಿ ಇರುವ ಮೊತ್ತವನ್ನು ಸಾಲ ಪಡೆದು ಚುಕ್ತಾ ಮಾಡುವಂತೆ ಇಂಧನ ಇಲಾಖೆಗೆ ರಾಜ್ಯ ಸರ್ಕಾರ ಮಾರ್ಚ್ 30ರಂದು ಆದೇಶ ನೀಡಿತ್ತು.

ಅಲ್ಲದೆ, ಹೀಗೆ ಪಾವತಿಸಿದ ಮೊತ್ತವನ್ನು ಗ್ರಾಮ ಪಂಚಾಯಿತಿಗಳ ವಾರ್ಷಿಕ ಅನುದಾನದಲ್ಲಿ ಅಥವಾ ಇಂತಹ ಅಗತ್ಯಗಳಿಗಾಗಿ ಸ್ಥಾಪಿಸಲಾದ ಗ್ಯಾರಂಟಿ ವಿಮೋಚನಾ ನಿಧಿಯಿಂದ ಹೊಂದಿಸಲು ಆರ್ಥಿಕ ಇಲಾಖೆ ಸಹಮತಿ ನೀಡಿದೆ.

ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಗಳಿಂದ ₹5,257.70 ಕೋಟಿ ಸಾಲ ಪಡೆಯಲು ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್ (ಪಿಸಿಕೆಎಲ್) ಸಂಸ್ಥೆಯನ್ನು ನೋಡಲ್ ಏಜೆನ್ಸಿಯಾಗಿ ಸರ್ಕಾರ ನೇಮಿಸಿತ್ತು. ಸಾಲ ಮರುಪಾವತಿವರೆಗೆ ವಾರ್ಷಿಕವಾಗಿ ಕಟ್ಟಬೇಕಾದ ಅಸಲು ಮತ್ತು ಬಡ್ಡಿ ಮೊತ್ತವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಬಜೆಟ್ನಲ್ಲಿಯೇ ಒದಗಿಸಬೇಕು ಎಂದೂ ಆದೇಶಿಸಿದೆ.

ಬಿಡ್ ಪ್ರಕ್ರಿಯೆ ಅಂತಿಮಗೊಂಡ ಬಳಿಕ ಹುಡ್ಕೊದಿಂದ ದೀರ್ಘಾವಧಿಗೆ ಸಾಲ ಪಡೆಯಲು ಪಿಸಿಕೆಎಲ್ಗೆ ಸರ್ಕಾರ ಅನುಮತಿ ನೀಡಿತ್ತು. ಈ ಸಂಬಂಧ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಮೇ 28ರಂದು ಸಾಲ ಮಂಜೂರಾತಿ ಪತ್ರ ನೀಡಿದ್ದ ಹುಡ್ಕೊ, ಜೂನ್ 19ರಂದು ಪಿಸಿಕೆಎಲ್ ಖಾತೆಗೆ ಹಣ ಜಮೆ ಮಾಡಿದೆ.

‘ವಿದ್ಯುತ್ ಪೂರೈಕೆ ಕಂಪನಿ ಮತ್ತು ನಿಗಮಗಳು ಸರ್ಕಾರಕ್ಕೆ ಸಲ್ಲಿಸಿದ ಬಾಕಿ ಮೊತ್ತದ ಮಾಹಿತಿಗೆ ಅನುಗುಣವಾಗಿ, ಆಯಾ ಕಂಪನಿಗಳ ಹಳೆ ಸಾಲದ ಮರು ಪಾವತಿಗೆ ಹುಡ್ಕೊದಿಂದ ಪಡೆದ ಸಾಲವನ್ನು ಬಳಸಿಕೊಳ್ಳಬೇಕು. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು’ ಎಂಬ ಷರತ್ತು ವಿಧಿಸಿ ಜೂನ್ 21ರಂದು ಪ್ರಸ್ತಾವಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಅನುಮೋದನೆ ನೀಡಿದ್ದಾರೆ.

ಬಿಡ್ನಲ್ಲಿ ಮೂರು ಹಣಕಾಸು ಸಂಸ್ಥೆಗಳು ಭಾಗಿ: ರಾಜ್ಯ ಸರ್ಕಾರದ ನಿರ್ದೇಶನದಂತೆ ₹5,257.70 ಕೋಟಿ ಸಾಲ ಪಡೆಯಲು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಪಿಸಿಕೆಎಲ್ ಸಭೆ ನಡೆಸಿತ್ತು. ಅಲ್ಲದೆ, ಎಲ್ಲ ಎಸ್ಕಾಂಗಳಿಗೆ ಪತ್ರ ಬರೆದು 2023ರ ಮಾರ್ಚ್ 31ರವರೆಗೆ ಗ್ರಾಮ ಪಂಚಾಯಿತಿವಾರು ವಿದ್ಯುತ್ ಬಿಲ್ ಬಾಕಿಯ ಮಾಹಿತಿ ನೀಡುವಂತೆ ಕೂಡಾ ತಿಳಿಸಿತ್ತು.

ಸಾಲ ಪಡೆಯಲು ಆಹ್ವಾನಿಸಿದ್ದ ಬಿಡ್ನಲ್ಲಿ ಯುಕೊ ಬ್ಯಾಂಕ್, ಹುಡ್ಕೊ ಮತ್ತು ಆರ್ಇಸಿ (ರೂರಲ್ ಎಲೆಕ್ಟ್ರಿಫಿಕೇಶನ್ ಕಾರ್ಪೋರೇಷನ್) ಭಾಗವಹಿಸಿದ್ದವು. ಯುಕೊ ಬ್ಯಾಂಕ್ ₹500 ಕೋಟಿ ಸಾಲವನ್ನು ವಾರ್ಷಿಕ ಶೇ 8.85 ಬಡ್ಡಿ ದರದಲ್ಲಿ ನೀಡುವುದಾಗಿ ಭರವಸೆ ನೀಡಿದರೆ, ₹5,257.70 ಕೋಟಿ ಸಾಲವನ್ನು ಹುಡ್ಕೊ ಶೇ 8.99 ಬಡ್ಡಿ ದರದಲ್ಲಿ ಮತ್ತು ಆರ್ಇಸಿ ಶೇ 9.15 ಬಡ್ಡಿ ದರದಲ್ಲಿ ನೀಡಲು ಮುಂದೆ ಬಂದಿತ್ತು. ಯುಕೊ ಮತ್ತು ಹುಡ್ಕೊ ಎಲ್ಲ ಶುಲ್ಕಗಳನ್ನು (ಅರ್ಜಿ ಶುಲ್ಕ, ಸಂಸ್ಕರಣಾ ಶುಲ್ಕ, ಸೇವಾ ಶುಲ್ಕ, ಸ್ಟ್ಯಾಂಪ್ ಡ್ಯೂಟಿ, ವಾರ್ಷಿಕ ಪರಿಶೀಲನಾ ಶುಲ್ಕ ಇತ್ಯಾದಿ) ಮನ್ನಾ ಮಾಡುವುದಾಗಿಯೂ ತಿಳಿಸಿತ್ತು.

‘ಬಡ್ಡಿಯನ್ನು ಕಡಿಮೆ ಮಾಡುವ ಕುರಿತಂತೆ ಈ ಮೂರೂ ಬಿಡ್ದಾರರ ಜೊತೆ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ನೇತೃತ್ವದಲ್ಲಿ ನಡೆದ ಮಾತುಕತೆಯ ಬಳಿಕ ಶೇ 8.75 (ವಾರ್ಷಿಕ) ಬಡ್ಡಿ ದರದಲ್ಲಿ ಸಾಲ ನೀಡಲು ಹುಡ್ಕೊ ಒಪ್ಪಿತ್ತು. ಹೀಗಾಗಿ, ಹುಡ್ಕೊದಿಂದ ಸಾಲ ಪಡೆಯಲಾಗಿದೆ. ಈ ಸಾಲವನ್ನು ವಿದ್ಯುತ್ ಸರಬರಾಜು ಕಂಪನಿಗಳ ಬಾಕಿ ಹಣವನ್ನು ಪಾವತಿಸಲು ವರ್ಗಾವಣೆ ಮಾಡಲಾಗುವುದು’ ಎಂದು ಇಂಧನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಕರೆ ಮಾಡಿದರೂ, ಅವರು ಸಂಪರ್ಕಕ್ಕೆ ಲಭ್ಯರಾಗಲಿಲ್ಲ.

ಹುಡ್ಕೊ ಷರತ್ತುಗಳೇನು?

* ಸಾಲಗಳಿಗೆ ಹುಡ್ಕೊ ಸದ್ಯ ಶೇ 10.45 ಬಡ್ಡಿ ದರ ವಿಧಿಸುತ್ತಿದೆ. ರಾಜ್ಯ ಸರ್ಕಾರಕ್ಕೆ ಶೇ 1.45ರಷ್ಟು ಕಡಿತಗೊಳಿಸಿ ಮತ್ತು ಸಾಲಕ್ಕೆ ಸರ್ಕಾರವೇ ಖಾತ್ರಿ ಕಾರಣಕ್ಕೆ ಶೇ 0.25ರಷ್ಟು ರಿಯಾಯಿತಿ ನೀಡಿ ಶೇ 8.75 ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ.

* ಸಾಲದ ಮೇಲಿನ ಬಡ್ಡಿಯನ್ನು ಪ್ರತಿ ತಿಂಗಳು, ಅಸಲು ಮೊತ್ತವನ್ನು ಮೂರು ತಿಂಗಳಿಗೊಮ್ಮೆ ಪಾವತಿಸಬೇಕು

* ಸಾಲ ಮರುಪಾವತಿ ಅವಧಿ 10 ವರ್ಷ (2 ವರ್ಷ ಮೊರಟೋರಿಯಂ, 8 ವರ್ಷ ಮರುಪಾವತಿ ಅವಧಿ)

* ಸಾಲದ ಭದ್ರತೆಗೆ ರಾಜ್ಯ ಸರ್ಕಾರದಿಂದ ಖಾತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.